ಉತ್ತರಪ್ರದೇಶ : ಹುಲಿ ಸೆರೆಗೆ ಇರಿಸಲಾಗಿದ್ದ ಬೋನಿಗೆ ತಾನೇ ಸಿಕ್ಕಿಬಿದ್ದ ಅರಣ್ಯ ಸಿಬ್ಬಂದಿ!
Author : KannadaprabhaNewsNetwork
| Updated : Sep 02 2024, 05:21 AM IST
ಅರಣ್ಯ ಸಿಬ್ಬಂದಿ | Kannada Prabha
Image Credit: KP
ಲಖೀಂಪುರ ಖೇರಿಯಲ್ಲಿ ಹುಲಿ ಸೆರೆಗೆ ಇರಿಸಲಾಗಿದ್ದ ಬೋನಿನಲ್ಲಿ ಅರಣ್ಯ ಸಿಬ್ಬಂದಿಯೊಬ್ಬರು ಸಿಕ್ಕಿಬಿದ್ದ ಘಟನೆ ನಡೆದಿದೆ. ಲಾಕ್‌ನಲ್ಲಿ ದೋಷ ಕಂಡುಬಂದ ಕಾರಣ ಸಿಬ್ಬಂದಿ ಹಲವು ಗಂಟೆಗಳ ಕಾಲ ಬೋನಿನಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಸತತ ಪ್ರಯತ್ನಗಳ ಬಳಿಕ ಅವರನ್ನು ರಕ್ಷಿಸಲಾಯಿತು.
ಲಖೀಂಪುರ: ಹುಲಿ ಸೆರೆಗೆ ಇರಿಸಲಾಗಿದ್ದ ಬೋನಿನೊಳಗೆ ಅರಣ್ಯ ಸಿಬ್ಬಂದಿಯೆ ಸಿಕ್ಕಿಬಿದ್ದ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಹಲವು ಗಂಟೆಗಳ ಸಾಹಸದ ಬಳಿಕ ಅರಣ್ಯ ಸಿಬ್ಬಂದಿಯನ್ನು ಬೋನಿನಿಂದ ಹೊರತಂದು ರಕ್ಷಿಸಲಾಗಿದೆ.
ಲಖೀಂಪುರ ಖೇರಿಯ ಇಲ್ಲಿನ ಮಹೇಶ್‌ಪುರ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹುಲಿ ಹಿಡಿಯಲು ಹಲವು ಬೋನು ಸಿದ್ಧಪಡಿಸಲಾಗಿತ್ತು. ಈ ವೇಳೆ ಸಿಬ್ಬಂದಿಯೊಬ್ಬ ಬೋನಿನ ಪರಿಶೀಲನೆಗೆ ಒಳಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಹೊರಗಿನಿಂದ ಲಾಕ್ ಆಗಿದೆ.
ಲಾಕ್‌ನಲ್ಲಿ ದೋಷ ಕಂಡುಬಂದ ಕಾರಣ ಏನು ಮಾಡಿದರೂ ಅದನ್ನು ತೆಗೆಯಲು ಬಂದಿಲ್ಲ. ಹೀಗಾಗಿ ಒಳಗಡೆ ಸಿಕ್ಕಿಬಿದ್ದ ಸಿಬ್ಬಂದಿ ಗಂಟೆಗಳ ಕಾಲ ಗೋಳಾಡಿದ್ದಾನೆ. ಬಳಿಕ ಸತತ ಪ್ರಯತ್ನಗಳ ಬಳಿಕ ಕೆಲ ಸಲಕರಣೆಗಳನ್ನು ಬಳಸಿ ಗೇಟ್ ಬಾಗಿಲನ್ನು ತೆರಯುವಲ್ಲಿ ಸಿಬ್ಬಂದಿಗಳು ಯಶಸ್ವಿಯಾದರು.
Latest Videos
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.