ಇನ್ನು ವಾ ಟ್ಸಾಪ್‌ನಲ್ಲೂ ತಿರುಮಲ ಸೇವೆ ಲಭ್ಯ: ಟಿಟಿಡಿ

| Published : Apr 10 2025, 01:15 AM IST

ಇನ್ನು ವಾ ಟ್ಸಾಪ್‌ನಲ್ಲೂ ತಿರುಮಲ ಸೇವೆ ಲಭ್ಯ: ಟಿಟಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಭಕ್ತಾದಿಗಳ ಅನುಕೂಲಕ್ಕಾಗಿ ಇದೇ ಮೊದಲ ಬಾರಿಗೆ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ವಾಟ್ಸಪ್‌ನಲ್ಲೂ ಸೇವೆ ನೀಡಲು ಮುಂದಾಗಿದೆ.

- 9552300009 ಸಂಖ್ಯೆ ಸೇವ್‌ ಮಾಡಿಕೊಳ್ಳಿತಿರುಮಲ: ಭಕ್ತಾದಿಗಳ ಅನುಕೂಲಕ್ಕಾಗಿ ಇದೇ ಮೊದಲ ಬಾರಿಗೆ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ವಾಟ್ಸಪ್‌ನಲ್ಲೂ ಸೇವೆ ನೀಡಲು ಮುಂದಾಗಿದೆ. ಇದರ ಭಾಗವಾಗಿ, 15 ಅಗತ್ಯ ಸೇವೆಗಳನ್ನು ವಾಟ್ಸಾಪ್‌ ಜತೆ ಸಂಯೋಜಿಸಲಾಗಿದೆ ಎಂದು ಟಿಟಿಡಿ ತಿಳಿಸಿದೆ. ಟಿಕೆಟ್‌ ಕಾಯ್ದಿರಿಸುವಿಕೆ, ವಸತಿ ಲಭ್ಯತೆ, ನೈಜ ಸಮಯ ಅಪ್‌ಡೇಟ್‌ಗಳಂತಹ ವ್ಯಸ್ಥೆಗಳ ಬಗ್ಗೆ ಮಾಹಿತಿ ಪಡೆಯಲು ಭಕ್ತರು ಈ ಸೌಲಭ್ಯವನ್ನು ಬಳಸಬಹುದು. ಬಳಕೆ ಹೇಗೆ?:

ಮೊದಲು 9552300009 ಸಂಖ್ಯೆಯನ್ನು ಸೇವ್‌ ಮಾಡಿಕೊಂಡು, ಬಳಿಕ ವಾಟ್ಸಪ್‌ನಲ್ಲಿ ಇದಕ್ಕೆ ‘ಹಾಯ್‌’ ಎಂದು ಸಂದೇಶ ಕಳಿಸಬೇಕು. ಆಗ ತೋರಿಸಲಾಗುವ ಆಯ್ಕೆಗಳಲ್ಲಿ ‘ಟಿಟಿಡಿ ದೇವಸ್ಥಾನದ ಸೇವೆ’ಯನ್ನು ಆಯ್ಕೆ ಮಾಡಬೇಕು. ಆಗ, ನಿಗದಿಯಾಗಿರುವ ಸರ್ವದರ್ಶನದ ಲೈವ್‌ ಸ್ಟೇಟಸ್‌, ಸರ್ವದರ್ಶನದ ಲೈವ್‌ ಸ್ಟೇಟಸ್‌, ಶ್ರೀ ವಾಣಿ ಟ್ರಸ್ಟ್‌ ಸ್ಟೇಟಸ್‌, ಮುಂಗಡ ಠೇವಣಿ ಮರುಪಾವತಿ ಲೈವ್ ಸ್ಟೇಟಸ್‌ ಎಂಬ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಸೂಕ್ತ ಆಯ್ಕೆಗಳನ್ನು ಆರಿಸಿಕೊಂಡು ಸೇವೆಗಳನ್ನು ಪಡೆಯಬಹುದು.ರಾಮನವಮಿ ನಿಮಿತ್ತ ತಿರುಮಲದಲ್ಲಿ ನಾಳೆ ಉಚಿತ ಲಡ್ಡುತಿರುಮಲ: ರಾಮನವಮಿಯ ಪ್ರಯುಕ್ತ ಏ.11ರಂದು ಆಯೋಜಿಸಲಾಗಿರುವ ಸೀತಾ ರಾಮ ಕಲ್ಯಾಣೋತ್ಸವದ ದಿನ ಭಕ್ತರಿಗೆ ಉಚಿತ ಲಡ್ಡು ಪ್ರಸಾದ ವಿತರಿಸಲು ಟಿಟಿಡಿ ನಿರ್ಧರಿಸಿದೆ.ಕಲ್ಯಾಣೋತ್ಸವದಂದು ಭಕ್ತರಿಗೆ 2 ನೀರಿನ ಬಾಟಲಿ, ತಿಂಡಿ, ಸಹಿ ಖಾದ್ಯಗಳು, ಮುತ್ತಿನ ಅಕ್ಷತೆ ಮತ್ತು ಅಕ್ಷತೆ, ಉಪಹಾರ, ಭೋಜನ, ಅನ್ನಪ್ರಸಾದವನ್ನು ನೀಡಲಾಗುವುದು. ಇದರೊಂದಿಗೆ 50 ರು. ಬಲೆಯ ಲಡ್ಡುಗಳನ್ನೂ ಉಚಿತವಾಗಿ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.ಟಿಟಿಡಿ ನೌಕರರ ವಿರೋಧ:ಉಚಿತ ಲಡ್ಡು ವಿತರಣೆಗೆ ಟಿಟಿಡಿ ಉದ್ಯೋಗಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ‘ಇದರಿಂದ ಜನ ಬೇರೆ ಹಬ್ಬಗಳಂದೂ ಇದೇ ನಿರೀಕ್ಷೆ ಇಟ್ಟುಕೊಳ್ಳಬಹುದು. ಜೊತೆಗೆ, ಪ್ರಸಾದ ಸಂಗ್ರಹಣೆ, ಅವ್ಯವಸ್ಥೆ, ಸುರಕ್ಷತೆಗೆ ಧಕ್ಕೆಯಂತಹ ಸಮಸ್ಯೆಗಳು ಉದ್ಭವಿಸಬಹುದು’ ಎಂದು ನೌಕಕರು ಕಳವಳ ವ್ಯಕ್ತಪಡಿಸಿದ್ದಾರೆ.