ಸಾರಾಂಶ
ಸನ್ ಟಿವಿ ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ ಕಿತ್ತಾಡುತ್ತಿರುವ ಮಾರನ್ ಸಹೋದರರಿಗೆ, ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಲಹೆ ನೀಡಿದ್ದಾರೆ.
ಚೆನ್ನೈ: ಸನ್ ಟಿವಿ ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ ಕಿತ್ತಾಡುತ್ತಿರುವ ಮಾರನ್ ಸಹೋದರರಿಗೆ, ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಲಹೆ ನೀಡಿದ್ದಾರೆ.
2003 ರಲ್ಲಿ ನಡೆದ ಸನ್ ಟಿವಿ ನೆಟ್‌ವರ್ಕ್‌ನ ಷೇರು ವಹಿವಾಟುಗಳನ್ನು ಆಕ್ಷೇಪಿಸಿ, ಡಿಎಂಕೆ ಸಂಸದರಾಗಿರುವ ದಯಾನಿಧಿ ಮಾರನ್ ಅವರು ತಮ್ಮ ಹಿರಿಯ ಸಹೋದರ ಕಲಾನಿಧಿ ಮಾರನ್ ಹಾಗೂ ಇನ್ನೂ 7 ಜನಕ್ಕೆ ಕೆಲ ತಿಂಗಳ ಹಿಂದೆ ನೋಟಿಸ್ ನೀಡಿದ್ದರು.
ಇದೀಗ ಸಹೋದರರ ನಡುವೆ ನಡುವೆ ಸಂಧಾನ ಮಾಡಿಸಲು, ಅವರ ಸಂಬಂಧಿ ಸ್ಟಾಲಿನ್ ಮುಂದಾಗಿದ್ದಾರೆ. ಇದರ ಬೆನ್ನಲ್ಲೇ, ದಯಾನಿಧಿ ಅವರು ನೋಟಿಸ್ ಹಿಂಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.