ಆರೋಗ್ಯ ಸರಿಪಡಿಸಲು ಔಷಧ ನೀಡಲೇಬೇಕು - ಸುಂಕ ಹೇರಿಕೆ ರದ್ದತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಕಾರ

| N/A | Published : Apr 08 2025, 12:31 AM IST / Updated: Apr 08 2025, 05:10 AM IST

ಆರೋಗ್ಯ ಸರಿಪಡಿಸಲು ಔಷಧ ನೀಡಲೇಬೇಕು - ಸುಂಕ ಹೇರಿಕೆ ರದ್ದತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಕಾರ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವದ ಅನೇಕ ದೇಶಗಳ ವಸ್ತುಗಳ ಆಮದಿಗೆ ಭಾರಿ ಸುಂಕ ಘೋಷಿಸಿ ವಿಶ್ವಾದ್ಯಂತ ಆರ್ಥಿಕ ವಿಪ್ಲವಕ್ಕೆ ಕಾರಣವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಸುಂಕ ಘೋಷಣೆಯಿಂದ ಹಿಂದೆ ಸರಿಯುವ ಸಾಧ್ಯತೆಗಳನ್ನು ಸೋಮವಾರ ನಿರಾಕರಿಸಿದ್ದಾರೆ.

 ವಾಷಿಂಗ್ಟನ್: ಡೊನಾಲ್ಡ್‌ ಟ್ರಂಪ್ ಅವರು ತೆರಿಗೆ ಹೆಚ್ಚಳವನ್ನು 90 ದಿನ ಮುಂದೂಡಬಹುದು ಎಂದು ಕೆಲವು ಮಾಧ್ಯಮಗಳು ಸೋಮವಾರ ಸಂಜೆ ವರದಿ ಮಾಡಿದ್ದವು. ಆದರೆ ಇದು ಸುಳ್ಳು ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.ಪಿಟಿಐ ಫ್ಲೋರಿಡಾ

ವಿಶ್ವದ ಅನೇಕ ದೇಶಗಳ ವಸ್ತುಗಳ ಆಮದಿಗೆ ಭಾರಿ ಸುಂಕ ಘೋಷಿಸಿ ವಿಶ್ವಾದ್ಯಂತ ಆರ್ಥಿಕ ವಿಪ್ಲವಕ್ಕೆ ಕಾರಣವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಸುಂಕ ಘೋಷಣೆಯಿಂದ ಹಿಂದೆ ಸರಿಯುವ ಸಾಧ್ಯತೆಗಳನ್ನು ಸೋಮವಾರ ನಿರಾಕರಿಸಿದ್ದಾರೆ. ‘ಕೆಲವೊಮ್ಮೆ ಏನನ್ನಾದರೂ ಸರಿಪಡಿಸಲು ನೀವು ಔಷಧಿ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಖಡಕ್ಕಾಗಿ ಹೇಳಿದ್ದಾರೆ. ಅಲ್ಲದೆ, ಚೀನಾ ತನ್ನ ಪ್ರತಿತೆರಿಗೆ ಹಿಂಪಡೆಯದಿದ್ದರೆ ಕ್ರಮ ಕೈಗೊಳ್ಳುವೆ ಎಂದು ಎಚ್ಚರಿಸಿದ್ದಾರೆ.

ಇದೇ ವೇಳೆ ತಮ್ಮ ಟ್ರುತ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಕಚ್ಚಾತೈಲ ಬೆಲೆಗಳು ಕಡಿಮೆಯಾಗಿವೆ, ಬಡ್ಡಿದರಗಳು ಕಡಿಮೆಯಾಗಿವೆ. ಆಹಾರ ಬೆಲೆಗಳು ಕಡಿಮೆಯಾಗಿವೆ, ಹಣದುಬ್ಬರವಿಲ್ಲ. ಅಮೆರಿಕವನ್ನು ದುರುಪಯೋಗಪಡಿಸಿಕೊಂಡು ಭಾರಿ ಸುಂಕ ಪೀಕಿದ್ದ ದೇಶಗಳಿಂದ ಶತಕೋಟಿ ಡಾಲರ್‌ನಷ್ಟು ಹಣ ಮರಳಿ ತರುತ್ತಿದ್ದೇನೆ’ ಎಂದಿದ್ದಾರೆ. ಈ ಮೂಲಕ ತಮ್ಮ ತೆರಿಗೆ ಹೇರಿಕೆ ಕ್ರಮ ಸಮರ್ಥಿಸಿದ್ದಾರೆ.

ಇದಕ್ಕೂ ಮುನ್ನ ಫ್ಲೋರಿಡಾ ಪ್ರವಾಸದಲ್ಲಿದ್ದ ಅವರು ಅಮೆರಿಕ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಕುಸಿತಕ್ಕೆ ಪ್ರತಿಕ್ರಿಯಿಸಿ, ‘ಮಾರುಕಟ್ಟೆಗಳಿಗೆ ಏನಾಗಲಿದೆ ಎಂದು ನಾನು ನಿಮಗೆ ಹೇಳಲಾರೆ. ಜಾಗತಿಕ ಮಾರುಕಟ್ಟೆಗಳು ಕುಸಿತ ಕಾಣುವುದು ನನಗೆ ಇಷ್ಟವಿಲ್ಲ. ಆದರೆ ಹಾಗಂತ ಕೆಲವು ವಿಪ್ಲವಗಳು ಸಂಭವಿಸಿದರೂ ಅದರಿಂದ ನನಗೆ ಚಿಂತೆಯಿಲ್ಲ. ಆದರೆ ನಮ್ಮ ದೇಶವು ಹೆಚ್ಚು ಬಲಿಷ್ಠವಾಗಿದೆ’ ಎಂದರು.

‘ಇತರ ದೇಶಗಳು ನಮ್ಮನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿವೆ. ಕೆಲವೊಮ್ಮೆ ಏನನ್ನಾದರೂ ಸರಿಪಡಿಸಲು ನೀವು ಔಷಧಿ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಮಾರ್ಮಿಕವಾಗಿ ನುಡಿದರು.

ಟ್ರಂಪ್‌ ಘೋಷಿಸಿರುವ ಪರಿಷ್ಕೃತ ಆಮದು ಸುಂಕ ಬುಧವಾರದಿಂದ ಜಾರಿಗೆ ಬರಲಿದೆ. ಅವರು ಭಾರತದ ಮೇಲೆ ಶೇ.26, ಚೀನಾ ಮೇಲೆ ಹೆಚ್ಚುವರಿ ಶೇ.34 ಹಾಗೂ ವಿಶ್ವದ ಇನ್ನೂ ಅನೇಕ ದೇಶಗಳ ಮೇಲೆ ಭಾರಿ ಪ್ರಮಾಣದ ಆಮದು ಸುಂಕ ಹೇರಿದ್ದಾರೆ.