: ಅಧಿಕಾರ ವಹಿಸಿಕೊಂಡ ಬಳಿಕ ಒಂದರ ಮೇಲೊಂದರಂತೆ ತೆರಿಗೆ ಹೇರುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈಗ ಉಕ್ಕು ಮತ್ತು ಅಲ್ಯುಮಿನಿಯಂ ಆಮದಿನ ಮೇಲೆ ಶೇ.25ರಷ್ಟು ತೆರಿಗೆ ಹೇರುವುದಾಗಿ ಘೋಷಿಸಿದ್ದಾರೆ.

ನವದೆಹಲಿ: ಅಧಿಕಾರ ವಹಿಸಿಕೊಂಡ ಬಳಿಕ ಒಂದರ ಮೇಲೊಂದರಂತೆ ತೆರಿಗೆ ಹೇರುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈಗ ಉಕ್ಕು ಮತ್ತು ಅಲ್ಯುಮಿನಿಯಂ ಆಮದಿನ ಮೇಲೆ ಶೇ.25ರಷ್ಟು ತೆರಿಗೆ ಹೇರುವುದಾಗಿ ಘೋಷಿಸಿದ್ದಾರೆ. ಟ್ರಂಪ್‌ರ ಈ ನಿರ್ಧಾರ ಭಾರತದ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತ ಅಮೆರಿಕಕ್ಕೆ ದೊಡ್ಡ ಮಟ್ಟದ ಉಕ್ಕು ರಫ್ತು ದೇಶಗಳ ಪೈಕಿ ಒಂದಾಗಿದೆ. ಇದೀಗ ತೆರಿಗೆ ಭಾರ ಹೆಚ್ಚಾದರೆ ರಫ್ತು ಕುಸಿದು ದೇಶೀಯ ಉದ್ಯಮಕ್ಕೆ ಹೊಡೆತ ಬೀಳಲಿದೆ. ಮತ್ತೊಂದೆಡೆ ಚೀನಾ ಕೂಡಾ ಅಮೆರಿಕದ ತೆರಿಗೆ ಹೊಡೆತದಿಂದ ಪಾರಾಗಲು, ಭಾರತಕ್ಕೆ ತನ್ನ ಉಕ್ಕು ಉತ್ಪನ್ನಗಳನ್ನು ತಂದು ಸುರಿಯುವ ಸಾಧ್ಯತೆ ಇದೆ.

 ಒಂದು ವೇಳೆ ಇದು ನಿಜವಾದರೆ ದೇಶೀಯ ಉಕ್ಕು ಉದ್ಯಮ ಮತ್ತು ಅದನ್ನು ಅವಲಂಬಿಸಿರುವ ಉದ್ಯಮಗಳಿಗೆ ಭಾರೀ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗಿದೆ. ಕಳೆದ ಕೆಲ ವರ್ಷಗಳಿಂದ ಭಾರತಕ್ಕೆ ಚೀನಾ ಉಕ್ಕು ಆಮದು ಗಮನಾರ್ಹ ಪ್ರಮಾಣದಲ್ಲಿ ಏರಿಕೆ ಕಂಡಿದೆ.