ಸಾರಾಂಶ
ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಗಳಲ್ಲಿ ಇನ್ನುಮುಂದೆ ಭಕ್ತರಿಗೆ ದರ್ಶನ, ಸೇವೆ, ಟಿಕೆಟ್ ಬುಕ್ಕಿಂಗ್ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ಆಧಾರ್ ಧೃಡೀಕರಣ ಹಾಗೂ ಇ-ಕೆವೈಸಿಯನ್ನು ಸರ್ಕಾರ ಕಡ್ಡಾಯಗೊಳಿಸಿದೆ. ದತ್ತಿ ಇಲಾಖೆ ಶನಿವಾರ ಅಧಿಕೃತ ಅಧಿಸೂಚನೆ ಪ್ರಕಟಿಸಿದ್ದು, ಈ ಮೂಲಕ ಅಕ್ರಮವಾಗಿ ಟಿಕೆಟ್ ಗಿಟ್ಟಿಸಲು ಅನ್ಯರ ಗುರುತನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಿದೆ.
ಆಧಾರ್ ಧೃಡೀಕರಣ ಅಳವಡಿಕೆಗೆ ಅನುಮತಿ ಕೋರಿ ಕಳೆದ ವರ್ಷ ಜುಲೈನಲ್ಲಿ ಟಿಟಿಡಿ ದತ್ತಿ ಇಲಾಖೆಗೆ ಪತ್ರ ಬರೆದಿತ್ತು. ಇದಕ್ಕೆ ಕೇಂದ್ರ ಸರ್ಕಾರ ಆಗಸ್ಟ್‌ನಲ್ಲಿ ಒಪ್ಪಿಗೆ ಸೂಚಿಸಿತ್ತು. ಇದೀಗ ಈ ವ್ಯವಸ್ಥೆ ಜಾರಿಗೆ ಬಂದಿದೆ.
ತಿರುಮಲ ದೇಗುಲದಲ್ಲಿ ಚಿನ್ನದ ಪೆಂಡೆಂಟ್ ಪಡೆಯಲು ಎಟಿಎಂ
ತಿರುಮಲ: ಆಂಧ್ರಪ್ರದೇಶದ ತಿರುಮಲ ದೇವಸ್ಥಾನದಲ್ಲಿ ತಿಮ್ಮಪ್ಪನ ಚಿನ್ನ ಹಾಗೂ ಬೆಳ್ಳಿ ಪೆಂಡೆಂಟ್ ಅನ್ನು (ಪದಕ) ಪಡೆಯಲು ಎಟಿಎಂ ಸ್ಥಾಪನೆಗೆ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಸಿದ್ಧತೆ ನಡೆಸಿದೆ. ಇದು ಸಾಕಾರಗೊಂಡರೆ ದೇಶದಲ್ಲೇ ಇಂಥ ಮೊದಲ ಪ್ರಯತ್ನವಾಗಲಿದೆ.ಯುಎಇಯಲ್ಲಿ ಎಐ ಚಾಲಿತ ಚಿನ್ನದ ಎಟಿಎಂ ಇರುವಂತೆ, ನದಗು ಪಾವತಿಸಿದರೆ ಅಥವಾ ಕಾರ್ವು ಸ್ವೈಪ್ ಮಾಡಿದರೆ ವೆಂಕಟೇಶ್ವರ ಹಾಗೂ ಲಕ್ಷ್ಮೀ ದೇವಿಯ ಚಿತ್ರವಿರುವ 2, 5, 10 ಗ್ರಾಂಗಳ ಪೆಂಡೆಂಟ್ ಬರುತ್ತದೆ. ಇದಕ್ಕೆ ಅಗತ್ಯ ತಂತ್ರಜ್ಞಾನ ಸಿದ್ಧಪಡಿಸಲು ಸಾಫ್ಟ್‌ವೇರ್ ಕಂಪನಿಗಳು ಹಾಗೂ ಎಐ ಸ್ಟಾರ್ಟ್‌ಅಪ್‌ಗಳನ್ನು ಟಿಟಿಡಿ ಕೋರಿದೆ
ಇಂಥ ಎಟಿಎಂಗಳನ್ನು ತಿರುಮಲ ದೇವಸ್ಥಾನ, ತಿರುಪತಿಯ ಗೋವಿಂದರಾಜ ದೇವಸ್ಥಾನ, ತಿರುಚನೂರಿನ ಪದ್ಮಾವತಿ ಅಮ್ಮಾವರಿ ದೇವಸ್ಥಾನಗಳಲ್ಲಿ ಅಳವಡಿಡಲು ಯೋಚಿಸಲಾಗುತ್ತಿದೆ.