ತಿರುಮಲ ತಿರುಪತಿ ದೇವಸ್ಥಾನಂ : ತುಂಡಾದ 1,000 ವರ್ಷ ಪುರಾತನ ರಾಮ ಮೂರ್ತಿ ಬೆರಳು ರಿಪೇರಿ

| Published : Nov 24 2024, 01:47 AM IST / Updated: Nov 24 2024, 04:41 AM IST

ಸಾರಾಂಶ

ತಿರುಪತಿ: 1,000 ವರ್ಷ ಪುರಾತನ ಎನ್ನಲಾದ ರಾಮನ ಮೂರ್ತಿಯ ಬೆರಳನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಇದೀಗ ಸರಿಪಡಿಸಿದೆ.

ತಿರುಪತಿ: 1,000 ವರ್ಷ ಪುರಾತನ ಎನ್ನಲಾದ ರಾಮನ ಮೂರ್ತಿಯ ಬೆರಳನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಇದೀಗ ಸರಿಪಡಿಸಿದೆ.

2021ರಲ್ಲಿ ಉತ್ಸವದ ವೇಳೆ ಮೂರ್ತಿ ಎಡಗೈಗೆ ಹಾನಿಯಾಗಿದ್ದು, ಅದನ್ನು ಚಿನ್ನದ ಲೇಪದಿಂದ ಮರೆಮಾಡಲಾಗಿತ್ತು.

‘ತಿರುಮಲದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಹಾನಿಗೊಳಗಾದ ಮೂರ್ತಿಗಳನ್ನು ಸರಿಪಡಿಸಲು ಸಮಾವೇಶ ನಡೆಸುವುದು ವಾಡಿಕೆಯಾಗಿದ್ದು, ಮುಂದಿನ ಸಮಾವೇಶ 2030ರಲ್ಲಿ ನಡೆಯಬೇಕಿತ್ತು. ಆದರೆ ಅದಕ್ಕಿನ್ನು 5ಕ್ಕಿಂತಲೂ ಅಧಿಕ ವರ್ಷವಿರುವುದರಿಂದ ಈಗಲೇ ಸಂಪ್ರೋಕ್ಷಣೆ ಕಾರ್ಯಕ್ರಮ ಆಯೋಜಿಸಿ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಜೀಯರ್‌ ಸ್ವಾಮಿಗಳು, ಆಗಮ ಸಲಹೆಗಾರರು ಮತ್ತು ಅರ್ಚಕರು ಮನವಿ ಮಾಡಿದ್ದರು’ ಎಂದು ಟಿಟಿಡಿ ತಿಳಿಸಿದೆ. ಅದರಂತೆ ಮಂಗಳವಾರ ಹಾಗೂ ಬುಧವಾರ ಶಾಸ್ತ್ರೋಕ್ರವಾಗಿ ದುರಸ್ತಿ ನಡೆಸಲಾಯಿತು.