ಟಿಟಿಡಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಮುಖ್ಯ ಗೌರವ ಅರ್ಚಕ ದೀಕ್ಷಿತುಲು ವಜಾ

| Published : Feb 28 2024, 02:37 AM IST / Updated: Feb 28 2024, 04:08 PM IST

 ದೀಕ್ಷಿತ್‌ | Kannada Prabha
ಟಿಟಿಡಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಮುಖ್ಯ ಗೌರವ ಅರ್ಚಕ ದೀಕ್ಷಿತುಲು ವಜಾ
Share this Article
  • FB
  • TW
  • Linkdin
  • Email

ಸಾರಾಂಶ

ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ದೇವಸ್ಥಾನದ ಟ್ರಸ್ಟ್‌ನ (ಟಿಟಿಡಿ) ಸಿಇಒ ಹಾಗೂ ಶ್ರೀಶೈಲದ ಅಹೋಬಿಲ ಮಠಾಧಿಪತಿಯ ವಿರುದ್ಧ ಆಕ್ಷೇಪಾರ್ಹ ವಿಡಿಯೋ ಪೋಸ್ಟ್‌ ಮಾಡಿದ ಆರೋಪದ ಸಂಬಂಧ ತಿರುಮಲ ದೇವಸ್ಥಾನದ ಮುಖ್ಯ ಗೌರವ ಅರ್ಚಕ ಎ.ವಿ.ರಮಣ ದೀಕ್ಷಿತುಲು ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ.

ತಿರುಮಲ: ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ದೇವಸ್ಥಾನದ ಟ್ರಸ್ಟ್‌ನ (ಟಿಟಿಡಿ) ಸಿಇಒ ಹಾಗೂ ಶ್ರೀಶೈಲದ ಅಹೋಬಿಲ ಮಠಾಧಿಪತಿಯ ವಿರುದ್ಧ ಆಕ್ಷೇಪಾರ್ಹ ವಿಡಿಯೋ ಪೋಸ್ಟ್‌ ಮಾಡಿದ ಆರೋಪದ ಸಂಬಂಧ ತಿರುಮಲ ದೇವಸ್ಥಾನದ ಮುಖ್ಯ ಗೌರವ ಅರ್ಚಕ ಎ.ವಿ.ರಮಣ ದೀಕ್ಷಿತುಲು ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ. 

ಟಿಟಿಡಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮರೆಡ್ಡಿ ಹಾಗೂ ಶ್ರೀಶೈಲದ ಅಹೋಬಿಲ ಮಠಾಧೀಶರು ಶ್ರೀಶೈಲದ ಗುಹೆಯೊಂದರಿಂದ ನಿಧಿ ತೆಗೆಯಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ ರಮಣ ದೀಕ್ಷಿತುಲು ವಿಡಿಯೋ ಪೋಸ್ಟ್‌ ಮಾಡಿದ್ದರು. 

ಅದು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿತ್ತು. ಇದರ ವಿರುದ್ಧ ಪೊಲೀಸರಿಗೂ ಟಿಟಿಡಿ ದೂರಿತ್ತು. ಈಗ ಅವರನ್ನು ಮುಖ್ಯ ಹೌರವ ಅರ್ಚಕ ಹುದ್ದೆಯಿಂದ ವಜಾ ಮಾಡಲಾಗಿದೆ.