ಸಾರಾಂಶ
ದೇಶಾದ್ಯಂತ 1 ಕೋಟಿ ಭಗವದ್ಗೀತೆ ಪ್ರತಿಗಳನ್ನು 5 ಭಾಷೆಗಳಲ್ಲಿ ಮುದ್ರಿಸಿ ಸನಾತನ ಧರ್ಮ ಪ್ರಚುರಪಡಿಸಲು ತಿರುಪತಿ ತಿರುಮಲ ದೇಗುಲ ಮಂಡಳಿ ನಿರ್ಧರಿಸಿದೆ.
ತಿರುಮಲ: ಕನ್ನಡವೂ ಸೇರಿ ಐದು ಭಾಷೆಗಳಲ್ಲಿ ಭಗವದ್ಗೀತೆಯನ್ನು ಸರಳ ಭಾಷೆಯಲ್ಲಿ ಅರ್ಥವಾಗುವಂತೆ ಮುದ್ರಿಸಿ 1 ಕೋಟಿ ಪ್ರತಿಗಳನ್ನು ದೇಶಾದ್ಯಂತ ಶಾಲಾ ಮಕ್ಕಳಿಗೆ ವಿತರಿಸಲು ತಿರುಪತಿ ತಿರುಮಲ ದೇಗುಲ ಟ್ರಸ್ಟ್ ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಿದ ಟಿಟಿಡಿ ಅಧ್ಯಕ್ಷರಾದ ಬಿ. ಕರುಣಾಕರ ರೆಡ್ಡಿ, ‘ಸನಾತನ ಧರ್ಮವನ್ನು ಪ್ರಚುರಪಡಿಸುವ ಅಂಗವಾಗಿ ಭಗವದ್ಗೀತೆಯನ್ನು ಸರಳವಾಗಿ ಅರ್ಥವಾಗುವಂತೆ ಅನುವಾದಿಸಿ 1 ಕೋಟಿ ಪ್ರತಿಗಳನ್ನು ಮುದ್ರಿಸಲು ತೀರ್ಮಾನಿಸಲಾಗಿದೆ. ಇದನ್ನು ಮೊದಲಿಗೆ ದೇಶಾದ್ಯಂತ ಶಾಲಾ ಮಕ್ಕಳಿಗೆ ವಿತರಿಸಲು ತೀರ್ಮಾನಿಸಲಾಗಿದೆ. ಈ ಪುಸ್ತಕವನ್ನು ತೆಲುಗು, ಕನ್ನಡ, ಇಂಗ್ಲಿಷ್, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಹೊರತರಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.