ರಷ್ಯಾ ಜೊತೆಗಿನ ಯುದ್ಧಕ್ಕೆ ಬೇಕಿರುವ ಹಣ ಹೊಂದಿಸಲು ಉಕ್ರೇನ್ ಸರ್ಕಾರ ಇದೀಗ ಪೋರ್ನೋಗ್ರಫಿ ಉದ್ಯಮವನ್ನು ಸಕ್ರಮಗೊಳಿಸಿ ಅದರ ಮೇಲೆ ತೆರಿಗೆ ವಿಧಿಸುವ ಕುರಿತು ಚಿಂತನೆ ನಡೆಸುತ್ತಿದೆ.
ಯುದ್ಧಕ್ಕೆ ಹಣ ಹೊಂದಿಸಲು ಬ್ಲೂಫಿಲಂ ಉದ್ಯಮ ಸಕ್ರಮ
ಅದರ ಮೇಲೆ ತೆರಿಗೆ ಹಾಕಿ 30,000 ಡ್ರೋನ್ ಖರೀದಿಸದ್ಯ ಉಕ್ರೇನ್‌ನಲ್ಲಿ ಪೋರ್ನೋಗ್ರಫಿಗಿದೆ ನಿಷೇಧ
ಆದ್ರೂ ಬೆಳೆಯುತ್ತಿರುವ ಪೋರ್ನೋಗ್ರಫಿ ಉದ್ಯಮತೆರಿಗೆ ಹಾಕಿದರೆ ₹236 ಕೋಟಿ ಸಂಗ್ರಹ ಸಾಧ್ಯತೆ
ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುತ್ತಿರುವ ಸರ್ಕಾರಕೀವ್: ರಷ್ಯಾ ಜೊತೆಗಿನ ಯುದ್ಧಕ್ಕೆ ಬೇಕಿರುವ ಹಣ ಹೊಂದಿಸಲು ಉಕ್ರೇನ್ ಸರ್ಕಾರ ಇದೀಗ ಪೋರ್ನೋಗ್ರಫಿ ಉದ್ಯಮವನ್ನು ಸಕ್ರಮಗೊಳಿಸಿ ಅದರ ಮೇಲೆ ತೆರಿಗೆ ವಿಧಿಸುವ ಕುರಿತು ಚಿಂತನೆ ನಡೆಸುತ್ತಿದೆ.
ಪೋರ್ನೋಗ್ರಫಿ (ಅಶ್ಲೀಲ ಚಿತ್ರಗಳು) ಮೂಲಕ ದೇಶಕ್ಕೆ ವಾರ್ಷಿಕ 236 ಕೋಟಿ ರು. ತೆರಿಗೆ ಸಂಗ್ರಹ ಆಗಲಿದೆ. ಇದರಿಂದ ರಷ್ಯಾ ಜತೆಗಿನ ಯುದ್ಧಕ್ಕೆ 30 ಸಾವಿರ ಡ್ರೋನ್‌ಗಳನ್ನು ಖರೀದಿಸಬಹುದು ಎಂಬ ಚಿಂತನೆ ಇದೆ.ಪೋರ್ನೋಗ್ರಫಿಗೆ ಸದ್ಯ ಉಕ್ರೇನ್‌ನಲ್ಲಿ ನಿಷೇಧ ಹೇರಲಾಗಿದೆ. ಬ್ಲೂಫಿಲಂ ನಿರ್ಮಾಣ, ಹಂಚಿಕೆ 7 ವರ್ಷಗಳ ವರೆಗೆ ಶಿಕ್ಷಾರ್ಹ ಅಪರಾಧ. ಆದರೆ ನಿರ್ಬಂಧದ ಹೊರತಾಗಿಯೂ ದೇಶದ ಪೋರ್ನೋಗ್ರಫಿ ಉದ್ಯಮ ಮಾತ್ರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಹೀಗಾಗಿ ಉಕ್ರೇನ್ ಸರ್ಕಾರವು ಅದನ್ನು ಸಕ್ರಮಗೊಳಿಸಿ ಅಶ್ಲೀಲ ಕಂಟೆಂಟ್ ಸೃಷ್ಟಿಸುವವರಿಂದ ತೆರಿಗೆ ಸಂಗ್ರಹಿಸಲು ಮುಂದಾಗಿದೆ.
ಆದರೆ, ಸದ್ಯ ಯಾರೂ ತಾವು ಅಶ್ಲೀಲ ಕಂಟೆಂಟ್‌ಗಳಿಂದ ಆದಾಯಗಳಿಸುತ್ತಿದ್ದೇವೆ ಎಂದು ಘೋಷಿಸಲು ಹಿಂದೇಟು ಹಾಕುತ್ತಿದ್ದಾರೆ. ಏಕೆಂದರೆ ಕಾನೂನು ಪ್ರಕಾರ ಅಶ್ಲೀಲ ಕಂಟೆಂಟ್ ಸೃಷ್ಟಿ ಶಿಕ್ಷಾರ್ಹ ಅಪರಾಧವಾಗಿದೆ.ಈ ಹಿನ್ನೆಲೆಯಲ್ಲಿ ಉಕ್ರೇನ್ ಸಂಸದ ಯಾರೋಸ್ಲಾವ್ ಝೆಲೆಜ್ನ್ಯಾಕ್ ಅವರು ಪೋರ್ನೋಗ್ರಫಿಯನ್ನು ಕಾನೂನುಬದ್ಧಗೊಳಿಸಬೇಕು ಮತ್ತು ಉದ್ದಿಮೆಯನ್ನು ಸಾಮಾನ್ಯ ಆರ್ಥಿಕತೆ ಜತೆ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ. ಇದರಿಂದ ವಾರ್ಷಿಕ 236 ಕೋಟಿ ರು. ತೆರಿಗೆ ಸಂಗ್ರಹ ಆಗಲಿದೆ. ಇಷ್ಟು ಹಣದಿಂದ 30 ಸಾವಿರ ಡ್ರೋನ್‌ಗಳನ್ನು ಖರೀದಿ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.