ತಂದೆಯು ಜಮೀನು ಮಾರಾಟ ಮಾಡಿ ಹಣ ತನಗೆ ನೀಡಲಿಲ್ಲ ಎಂಬ ಕಾರಣಕ್ಕೆ ತಂದೆಯೊಂದಿಗೆ ಜಗಳ ಮಾಡಿಕೊಂಡ ಮಗ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸುರಹೊನ್ನೆ ಗ್ರಾಮದಲ್ಲಿ ಗುರುವಾರ ನಡೆದಿದೆ.

ನ್ಯಾಮತಿ: ತಂದೆಯು ಜಮೀನು ಮಾರಾಟ ಮಾಡಿ ಹಣ ತನಗೆ ನೀಡಲಿಲ್ಲ ಎಂಬ ಕಾರಣಕ್ಕೆ ತಂದೆಯೊಂದಿಗೆ ಜಗಳ ಮಾಡಿಕೊಂಡ ಮಗ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸುರಹೊನ್ನೆ ಗ್ರಾಮದಲ್ಲಿ ಗುರುವಾರ ನಡೆದಿದೆ.

ತಾಲೂಕಿನ ಸುರಹೊನ್ನೆಯ ಶಾಂತಿ ನಗರದಲ್ಲಿ ವಾಸವಾಗಿದ್ದ ಮುದ್ದಪ್ಪ ಅವರ ಪುತ್ರ ನಿಂಗರಾಜು (42) ಮೃತ ವ್ಯಕ್ತಿ. ನಿಂಗರಾಜು ತನ್ನ ತಂದೆ ತಾಯಿ, ಪತ್ನಿ ಹಾಗೂ ಮಗನ ಜೊತೆ ವಾಸವಾಗಿದ್ದನು. ಕಳೆದ ತಿಂಗಳಲ್ಲಿ ಮುದ್ದಪ್ಪ ಜಮೀನು ಮಾರಾಟ ಮಾಡಿದ್ದನು. ಆದರೆ ಮಗ ನಿಂಗರಾಜು ಆ ಹಣಕ್ಕಾಗಿ ತಂದೆ ಜೊತೆ ಆಗಾಗ ಜಗಳವಾಡುತ್ತಿದ್ದನು. ಕುಟುಂಬ ನಿರ್ವಹಣೆ ಮಾಡದೇ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದನು. ಇದೇ ಕಾರಣಕ್ಕೆ ತಂದೆ ಮುದ್ದಪ್ಪ ಅವರು ನಿನ್ನ ಮಗನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಹಣ ಡಿಪಾಜಿಟ್‌ ಮಾಡುತ್ತೇನೆ, ಆದರೆ ನಿನಗೆ ಕೊಡುವುದಿಲ್ಲ. ನಿನ್ನ ಕೈಗೆ ಹಣ ಕೊಟ್ಟರೆ ಹಾಳು ಮಾಡುತ್ತೀಯ ಎಂದು ಹೇಳುತ್ತಿದ್ದರು.

ನಿಂಗರಾಜು ಪತ್ನಿ ಶಾಂತಮ್ಮ ಗರ್ಭಿಣಿ ಆಗಿದ್ದರಿಂದ ಬಾಣಂತನಕ್ಕೆ ತವರಿಗೆ ಹೋಗಿದ್ದರು. ಆಗ ಮತ್ತೆ ತಂದೆಯ ಜೊತೆ ಹಣ ಕೊಡು ಇಲ್ಲದಿದ್ದರೆ ನಾನು ಸಾಯುತ್ತೇನೆ ಎಂದು ಮಗ ಬೆದರಿಸಿದ್ದಾನೆ ಆದರೆ ತಂದೆ ನಿನ್ನ ಮಗನ ಹೆಸರಿನಲ್ಲಿ ಡಿಪಾಸಿಟ್‌ ಇಟ್ಟಿದ್ದೇನೆ ಎಂದು ಹೇಳಿದ್ದಾರೆ. ಜಗಳ ಮಾಡಿಕೊಂಡು ಮನೆಯಲ್ಲಿಯೇ ನೇಣು ಹಾಕಿಕೊಂಡಿದ್ದಾನೆ. ವಿಷಯ ತಿಳಿದ ತಂದೆ, ತಾಯಿ ನ್ಯಾಮತಿ ಸಮುದಾಯ ಆಸ್ಪತ್ರೆಗೆ ಕರೆತಂದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆಂದು ವೈದ್ಯರು ದೃಢಪಡಿಸಿದ್ದಾರೆ.

ಬಾಣತನಕ್ಕೆಂದು ತವರಿಗೆ ಹೋಗಿದ್ದ ಶಾಂತಮ್ಮ ಅವರಿಗೆ ಪತಿ ನಿಂಗರಾಜು ಆತ್ಮಹತ್ಯೆ ವಿಷಯ ತಿಳಿಸಲಾಯಿತು. ಆಗ ಪತ್ನಿ ಬಂದು ತನ್ನ ಪತಿಯು ಬೇಜವಾಬ್ದಾರಿ ಮನುಷ್ಯನಾಗಿದ್ದು, ಹಣಕ್ಕಾಗಿ ಆಗಾಗ ತಂದೆ ಜೊತೆ ಜಗಳವಾಡುತ್ತಿದ್ದರು. ಅವರ ಆತ್ಮಹತ್ಯೆಯಲ್ಲಿ ಅನುಮಾನವಿಲ್ಲ ಎಂದು ನ್ಯಾಮತಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

- - -

-000005_92.JPG: ನಿಂಗರಾಜು