ಸಾರಾಂಶ
ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ನೀರಿನಲ್ಲಿ ಕೊಚ್ಚಿಹೋದ ಘಟನೆ ಬಿಹಾರ ಮಧುಬನಿ ಜಿಲ್ಲೆಯ ಮಾಧೇಪುರದಲ್ಲಿ ನಡೆದಿದೆ.
ಮಧುಬನಿ: ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ನೀರಿನಲ್ಲಿ ಕೊಚ್ಚಿಹೋದ ಘಟನೆ ಬಿಹಾರ ಮಧುಬನಿ ಜಿಲ್ಲೆಯ ಮಾಧೇಪುರದಲ್ಲಿ ನಡೆದಿದೆ. ಕಳೆದ 10 ದಿನಗಳಲ್ಲಿ ಸೇತುವೆ ಕುಸಿತದ 5ನೇ ಘಟನೆ ಇದಾಗಿದೆ.
ಕುಸಿತಕ್ಕೆ ಕಾರಣ ಪತ್ತೆ ಮಾಡಲು ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ. ಭಾರೀ ಮಳೆಯ ಕಾರಣ ನದಿಯಲ್ಲಿ ನೀರಿನ ರಭಸ ಅಧಿಕವಿದ್ದು, ಭೂತಿಯಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಸೇತುವೆ ಕುಸಿದಿದೆ ಎಂದು ವರದಿಗಳು ಮಾಹಿತಿ ನೀಡಿವೆ. ಇದುವರೆಗೆ ಯಾವುದೇ ಸಾವು-ನೋವು ವರದಿಯಾಗಿಲ್ಲ. ಕಳೆದ ಒಂದು ವರ್ಷದಲ್ಲಿ ಇಂತಹ 14 ಘಟನೆಗಳಿಗೆ ರಾಜ್ಯ ಸಾಕ್ಷಿಯಾಗಿದೆ.