ಸಾರಾಂಶ
ನವದೆಹಲಿ: ಬ್ರಿಟನ್‌ನ ಲಿವರ್‌ಪೂಲ್ ವಿಶ್ವ ವಿದ್ಯಾನಿಲಯವು ಭಾರತದಲ್ಲಿ ತನ್ನ ಮೊದಲ ಶಾಖೆಯನ್ನು ಆರಂಭಿಸಲು ಮುಂದಾಗಿದ್ದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೊಸ ಶಾಖೆ ಪ್ರಾರಂಭಿಸಲಿದ್ದು, ಮುಂದಿನ ವರ್ಷದ ಆಗಸ್ಟ್‌ನಿಂದ ಮೊದಲ ಬ್ಯಾಚ್ ಆರಂಭವಾಗಲಿದೆ.
ಬ್ರಿಟನ್‌ನ ರಸೆಲ್ ಗ್ರೂಪ್‌ನ ಭಾಗವಾಗಿರುವ ಲಿವರ್‌ಪೂಲ್ ವಿಶ್ವವಿದ್ಯಾನಿಲಯವು ಬೆಂಗಳೂರಿನಲ್ಲಿ ತನ್ನ ಮೊದಲ ವಿದೇಶಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ ತೆರೆಯಲಿದೆ. ಇದಕ್ಕೆ ಯುಜಿಸಿ ಅನುಮೋದನೆ ದೊರೆತಿದ್ದು, ಸೋಮವಾರ ಕೇಂದ್ರ ಶಿಕ್ಷಣ ಧರ್ಮೇಂದ್ರ ಪ್ರಧಾನ್ ಈ ಕುರಿತ ಪ್ರಮಾಣ ಪತ್ರ ಹಸ್ತಾಂತರಿಸಿದರು.
ಬೆಂಗಳೂರು ಕ್ಯಾಂಪಸ್ ಆರಂಭದಲ್ಲಿ ವ್ಯವಹಾರ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ, ಹಣಕಾಸು, ಕಂಪ್ಯೂಟರ್ ಸೈನ್ಸ್ಮ ಬಯೋಮೆಡಿಕಲ್ ಸೈನ್ಸ್ ಕೋರ್ಸ್‌ಗಳನ್ನು ಒದಗಿಸುತ್ತದೆ, ಇದರ ಜೊತೆಗೆ ಗೇಮ್ ಡಿಸೈನ್ ಕೋರ್ಸ್ ಕೂಡ ಇರಲಿದ್ದು, 2026ರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಮೊದಲ ಬ್ಯಾಚ್ ಆರಂಭವಾಗಲಿದೆ.ಸೌತಾಂಪ್ಟನ್ ವಿವಿಯು ಭಾರತದಲ್ಲಿ ಅನುಮೋದನೆ ಪಡೆದ ಮೊದಲ ಬ್ರಿಟನ್ ವಿವಿಯಾಗಿದ್ದು, ಇದೇ ವರ್ಷದ ಜುಲೈನಲ್ಲಿ ಗುರುಗ್ರಾಮ್‌ನಲ್ಲಿ ಶೈಕ್ಷಣಿಕ ಕಾರ್ಯಕ್ರಮ ಆರಂಭಿಸಲಿದೆ. ಈ ಶೈಕ್ಷಣಿಕ ವರ್ಷದ ವೇಳೆಗೆ 15 ವಿದೇಶಿ ವಿಶ್ವವಿದ್ಯಾನಿಲಯಗಳು ಭಾರತಕ್ಕೆ ಬರಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಪಹಲ್ಗಾಂ ಬಳಿಕ ಕೈತಪ್ಪಿದ ಪ್ರವಾಸಿಗರ ಸೆಳೆಯಲು ಕಾಶ್ಮೀರ ಶೇ.50 ರಿಯಾಯ್ತಿ
ಶ್ರೀನಗರ: ಕಳೆದ ತಿಂಗಳ 22 ರಂದು ಕಣಿವೆ ರಾಜ್ಯ ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಪ್ರವಾಸಿಗರ ಕೊರತೆ ಎದುರಿಸುತ್ತಿರುವ ಜಮ್ಮು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಸರ್ಕಾರ ಮೇ 27 ರಿಂದ 4 ದಿನಗಳ ಫೇಮ್ ಟೂರ್ ಆಯೋಜಿಸಿದೆ. ಇದರಲ್ಲಿ ಪ್ರವಾಸಿಗರಿಗೆ ಪ್ರವಾಸಿ ಪ್ಯಾಕೇಜ್‌ಗಳಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಿಸಿದೆ.
ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿದ್ದ ಕಣಿವೆ ರಾಜ್ಯದಲ್ಲಿ ಪಹಲ್ಗಾಂ ದಾಳಿ ಬಳಿಕ ಎಲ್ಲವೂ ಬದಲಾಗಿದೆ. ಆ ವಲಯ ಅವಲಂಬಿತವಾಗಿದ್ದ 3 ಲಕ್ಷ ಕಾರ್ಮಿಕರ ಬದುಕು ಅತಂತ್ರವಾಗಿದೆ. ಮುಂಚಿತವಾಗಿ ಬುಕ್ಕಿಂಗ್ ಆಗಿದ್ದ ಶೇ.90ರಷ್ಟು ಪ್ರವಾಸಿ ಪ್ಯಾಕೇಜ್‌ಗಳು ರದ್ದುಗೊಂಡಿತ್ತು. ಹೀಗಾಗಿ ಮತ್ತೆ ಪುನಶ್ಚೇತನದ ನಿಟ್ಟಿನಲ್ಲಿ ಫೇಮ್ ಟೂರ್ ಆಯೋಜನೆಯಾಗಿದ್ದು, ಪ್ರವಾಸಿಗರಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಫೇಮ್ ಟೂರ್ ನಡೆಯಲಿದ್ದು, ಮೇ 27 ರಿಂದ 30 ರ ತನಕ ಪಹಲ್ಗಾಮ್, ಶ್ರೀನಗರ, ಸೋನ್ಮಾರ್ಗ್, ಗುಲ್ಮಾರ್ಗ್‌ಗೆ ಪ್ರವಾಸ ಕೈಗೊಳ್ಳಲಿದೆ.

;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))