: ಭಾರತಕ್ಕೆ ಬೇಕಿದ್ದ ಉಗ್ರರು, ಪಾಕ್ ನೆಲದಲ್ಲಿ ಅನಾಮಿಕ ವ್ಯಕ್ತಿಗಳ ದಾಳಿಗೆ ಬಲಿಯಾಗುವ ಸರಣಿ ಮುಂದುವರೆದಿದೆ. ಕಾಶ್ಮೀರದಲ್ಲಿ ಜಿಹಾದ್ ನಡೆಸುತ್ತಿದ್ದ ಲಷ್ಕರ್ ಎ ತೊಯ್ಬಾ ಕಮಾಂಡರ್ ಬಿಲಾಲ್ ಆರಿಫ್ ಸಲಾಫಿಯಾನನ್ನು ಅನಾಮಿಕ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಇದರೊಂದಿಗೆ ಕಳೆದ 4 ವರ್ಷದಲ್ಲಿ ಪಾಕ್‌ನಲ್ಲಿ ಇದೇ ರೀತಿ ಹತ್ಯೆಯಾದ ಉಗ್ರರ ಸಂಖ್ಯೆ 33ಕ್ಕೆ ತಲುಪಿದೆ.
ಕಾಶ್ಮೀರದಲ್ಲಿ ಜಿಹಾದಿ ನಡೆಸುತ್ತಿದ್ದ ಬಿಲಾಲ್‌ಇಸ್ಲಾಮಾಬಾದ್: ಭಾರತಕ್ಕೆ ಬೇಕಿದ್ದ ಉಗ್ರರು, ಪಾಕ್ ನೆಲದಲ್ಲಿ ಅನಾಮಿಕ ವ್ಯಕ್ತಿಗಳ ದಾಳಿಗೆ ಬಲಿಯಾಗುವ ಸರಣಿ ಮುಂದುವರೆದಿದೆ. ಕಾಶ್ಮೀರದಲ್ಲಿ ಜಿಹಾದ್ ನಡೆಸುತ್ತಿದ್ದ ಲಷ್ಕರ್ ಎ ತೊಯ್ಬಾ ಕಮಾಂಡರ್ ಬಿಲಾಲ್ ಆರಿಫ್ ಸಲಾಫಿಯಾನನ್ನು ಅನಾಮಿಕ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಇದರೊಂದಿಗೆ ಕಳೆದ 4 ವರ್ಷದಲ್ಲಿ ಪಾಕ್‌ನಲ್ಲಿ ಇದೇ ರೀತಿ ಹತ್ಯೆಯಾದ ಉಗ್ರರ ಸಂಖ್ಯೆ 33ಕ್ಕೆ ತಲುಪಿದೆ.ಗುಂಡೇಟು:
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುರ್ಡಿಕೆಯ ಮರ್ಕಜ್ ತೈಬಾದಲ್ಲಿ ರಂಜಾನ್ ಪ್ರಾರ್ಥನೆ ಮುಗಿಸಿ ಹೊರಬರುವ ವೇಳೆ ಬಿಲಾಲ್ ಮೇಲೆ ಅನಾಮಿಕ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಏಕಾಏಕಿ ಗುಂಡಿನ ದಾಳಿಯಾಗುತ್ತಿದ್ದಂತೆ ಸ್ಥಳದಲ್ಲಿದ್ದವರು ದಿಕ್ಕಾಪಾಲಾಗಿ ಓಡಿದ್ದಾರೆ. ಈ ವೇಳೆ ಗಾಯಗೊಂಡಿದ್ದ ಸಲಾಫಿಯನ್ನು ಸಮೀಪದಲ್ಲಿದ್ದ ಜನರು ಎತ್ತಿಕೊಳ್ಳಲು ಪ್ರಯತ್ನಿಸುತ್ತಿರುವುದು, ಆತ ಒದ್ದಾಡುತ್ತಿರುವುದು ಸಮೀಪದ ಸಿಸಿಟೀವಿಯಲ್ಲಿ ಸೆರೆಯಾಗಿದೆ.ಬಿಲಾಲ್ ಲಷ್ಕರ್‌ನ ಉನ್ನತ ಶ್ರೇಣಿಯ ಕಮಾಂಡರ್ ಆಗಿದ್ದು, ಪಾಕಿಸ್ತಾನದಾದ್ಯಂತ ಯುವಕರನ್ನು ಕಾಶ್ಮೀರ ಜಿಹಾದ್‌ಗೆ ಸೇರಿಸುವ ಹೊಣೆ ಹೊತ್ತಿದ್ದನು. ಇದಕ್ಕಾಗಿ ಮರ್ಕಜ್ ತೈಬಾವನ್ನು ತನ್ನ ನೆಲೆಯಾಗಿ ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ.