ಸಾರಾಂಶ
ಉತ್ತರ ಪ್ರದೇಶದಲ್ಲಿ ಸೋಮವಾರದಂದು ಹಣಕಾಸು ಸಚಿವರಾದ ಯೋಗಿ ಆದಿತ್ಯನಾಥ್ 7 ಲಕ್ಷ ಕೋಟಿ ರು.ಗೂ ಅಧಿಕ ಮೊತ್ತದ ಬಜೆಟ್ ಮಂಡನೆ ಮಾಡುವ ಸಾಧ್ಯತೆ ಇದೆ.
ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.
ಈ ಬಾರಿ ರಾಜ್ಯ ಸರ್ಕಾರದ, ರಾಜ್ಯದ ಇತಿಹಾಸದಲ್ಲೇ ಗರಿಷ್ಠ ಪ್ರಮಾಣವಾದ 7- 7.50 ಲಕ್ಷ ಕೋಟಿ ರು. ಮೊತ್ತದ ಬಜೆಟ್ ಮಂಡಿಸಲಿದೆ ಎನ್ನಲಾಗಿದೆ.ಈ ಬಾರಿಯ ಲೋಕಸಭೆ ಚುನಾವಣೆಯೂ ಸನ್ನಿಹಿತವಾಗಿರುವ ಕಾರಣ ಈ ಬಾರಿ ರಾಜ್ಯ ಸರ್ಕಾರ ಭರ್ಜರಿ ಘೋಷಣೆಗಳನ್ನು ನೀಡಲಿದೆ.
ಜೊತೆಗೆ ಅನುದಾನಗಳ ಪ್ರಮಾಣವನ್ನು ಹೆಚ್ಚಳ ಮಾಡಲಿದೆ ಎಂದು ಉತ್ತರ ಪ್ರದೇಶ ಹಣಕಾಸು ಸಚಿವ ಸುರೇಶ್ ಖನ್ನಾ ಹೇಳಿದ್ದಾರೆ. ಕಳೆದ ಬಾರಿ 6.90 ಲಕ್ಷ ಕೋಟಿ ರು. ಗಾತ್ರದ ಬಜೆಟ್ ಮಂಡಿಸಲಾಗಿತ್ತು.