ಸಾರಾಂಶ
ಕಳ್ಳತನ ಪ್ರಕರಣವೊಂದರಲ್ಲಿ ಕಳ್ಳನ ಪತ್ತೆಗಾಗಿ ಬಲೆ ಬೀಸುವ ಬದಲು ನ್ಯಾಯಾಧೀಶರಿಗಾಗಿ ಹುಡುಕಾಟ ನಡೆಸಿದ ವಿಚಿತ್ರ ಘಟನೆ ಉತ್ತರಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದಿದೆ. ಪೊಲೀಸರು ಈ ಎಡವಟ್ಟು ಭಾರೀ ಟೀಕೆಗೆ ಗುರಿಯಾಗಿದೆ.
ನವದೆಹಲಿ: ಕಳ್ಳತನ ಪ್ರಕರಣವೊಂದರಲ್ಲಿ ಕಣ್ಣನ ಪತ್ತೆಗಾಗಿ ಬಲೆ ಬೀಸುವ ಬದಲು ನ್ಯಾಯಾಧೀಶರಿಗಾಗಿ ಹುಡುಕಾಟ ನಡೆಸಿದ ವಿಚಿತ್ರ ಘಟನೆ ಉತ್ತರಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದಿದೆ. ಪೊಲೀಸರು ಈ ಎಡವಟ್ಟು ಭಾರೀ ಟೀಕೆಗೆ ಗುರಿಯಾಗಿದೆ.
ಕಳ್ಳತನ ಪ್ರಕರಣವೊಂದರಲ್ಲಿ ಆರೋಪಿ ರಾಜ್‌ಕುಮಾರ್‌ಗೆ ಸ್ಥಳೀಯ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಆದರೆ ನೋಟಿಸ್ ನೀಡಲು ನಿಯೋಜನೆಗೊಂಡಿದ್ದ ಅಧಿಕಾರಿ ಕಳ್ಳನ ಹೆಸರಿನ ಜಾಗದಲ್ಲಿ ರಾಜ್‌ಕುಮಾರ್ ಬದಲು, ಆದೇಶ ಹೊರಡಿಸಿದ್ದ ಜಡ್ಜ್ ನಗ್ಮಾಖಾನ್ ಹೆಸರು ಬರೆದಿದ್ದಾರೆ.ಹೀಗಾಗಿ ಪೊಲೀಸರು ನಗ್ಮಾ ಖಾನ್ ಹೆಸರಿನ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಾರೆ. ಬಳಿಕ ನ್ಯಾಯಾಲಯದಲ್ಲಿ ‘ಜಾಮೀನು ರಹಿತ ವಾರಂಟ್ ಜಾರಿಗೆ ಮುಂದಾದಾಗ ಆ ವಿಳಾಸದಲ್ಲಿ ನಗ್ಮಾ ಹೆಸರಿನಲ್ಲಿ ಯಾರು ಇರಲಿಲ್ಲ’ ಎಂದು ಕೋರ್ಟ್‌ಗೆ ತಿಳಿಸಿದ್ದರು. ಈ ವೇಳೆ ನ್ಯಾಯಾಧೀಶೆ ನಗ್ಮಾ ಅವರಿಗೆ ಪೊಲೀಸ್ ಅಧಿಕಾರಿಯ ಗೊಂದಲ ಬೆಳಕಿಗೆ ಬಂದಿದೆ.