ಉತ್ತರ ಪ್ರದೇಶದ ಕರ್ಹಾಲ್‌ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿಸಿದ್ದಕ್ಕೆ ದಲಿತ ಮಹಿಳೆ ಕೊಲೆ?

| Published : Nov 21 2024, 01:05 AM IST / Updated: Nov 21 2024, 04:23 AM IST

ಸಾರಾಂಶ

ಉತ್ತರ ಪ್ರದೇಶದ ಕರ್ಹಾಲ್‌ ಕ್ಷೇತ್ರದಲ್ಲಿ 23 ವರ್ಷದ ಮಹಿಳೆ ಶವ ಗೋಣಿ ಚೀಲದಲ್ಲಿ ಪತ್ತೆಯಾಗಿದೆ. ಬುಧವಾರ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ಈ ಕೊಲೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಲಖನೌ: ಉತ್ತರ ಪ್ರದೇಶದ ಕರ್ಹಾಲ್‌ ಕ್ಷೇತ್ರದಲ್ಲಿ 23 ವರ್ಷದ ಮಹಿಳೆ ಶವ ಗೋಣಿ ಚೀಲದಲ್ಲಿ ಪತ್ತೆಯಾಗಿದೆ. ಬುಧವಾರ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ಈ ಕೊಲೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

‘ಮಹಿಳೆಗೆ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದಂತೆ ಸ್ಥಳೀಯ ಸಮಾಜವಾದಿ ಪಕ್ಷದ ಕಾರ್ಯಕರ್ತರೊಬ್ಬರು ಒತ್ತಡ ಹೇರುತ್ತಿದ್ದರು. 3 ದಿನಗಳ ಹಿಂದೆ ಎಸ್‌ಪಿ ಪಕ್ಷದ ಪ್ರಶಾಂತ್ ಯಾದವ್‌ ನಮ್ಮ ಮನೆಗೆ ಬಂದು ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆಗೆ ಮತ ಹಾಕುವಂತೆ ಕೇಳಿದ್ದರು.

 ಆದರೆ ನಮ್ಮ ಕುಟುಂಬಕ್ಕೆ ಪಿಎಂ ಆವಾಸ್‌ ಯೋಜನೆಯಡಿ ಮನೆ ದೊರೆತಿರುವುದರಿಂದ ಬಿಜೆಪಿ ಹಾಕುತ್ತೇವೆ ಎಂದು ಹೇಳಿದ್ದೆವು. ಈ ಕಾರಣಕ್ಕೆ ಕೊಲೆ ನಡೆದಿದೆ ’ ಎಂದು ಮೃತ ಮಹಿಳೆ ಕುಟುಂಬಸ್ಥರು ಹೇಳಿದ್ದಾರೆ. ಮಹಿಳೆಯ ತಂದೆ ನೀಡಿದ ದೂರಿನನ್ವಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಸಾವಿನ ವಿಚಾರವಾಗಿ ಸಮಾಜವಾದಿ ಪಕ್ಷದ ನಡೆಗೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.