ಯೋಗಿ ಸರ್ಕಾರ ಹೊಸ ಸಾಮಾಜಿಕ ಮಾಧ್ಯಮ ನೀತಿ : ದೇಶ ವಿರೋಧಿ ಪೋಸ್ಟ್‌ಗೆ ಜೀವಾವಧಿ, ಸರ್ಕಾರದ ಸ್ಕೀಂ ಪ್ರಸಾರಕ್ಕೆ ಗಿಫ್ಟ್‌!

| Published : Aug 29 2024, 12:49 AM IST / Updated: Aug 29 2024, 05:00 AM IST

ಯೋಗಿ ಸರ್ಕಾರ ಹೊಸ ಸಾಮಾಜಿಕ ಮಾಧ್ಯಮ ನೀತಿ : ದೇಶ ವಿರೋಧಿ ಪೋಸ್ಟ್‌ಗೆ ಜೀವಾವಧಿ, ಸರ್ಕಾರದ ಸ್ಕೀಂ ಪ್ರಸಾರಕ್ಕೆ ಗಿಫ್ಟ್‌!
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ, ಹೊಸ ಸಾಮಾಜಿಕ ಮಾಧ್ಯಮ ನೀತಿಯನ್ನು ಜಾರಿಗೆ ತಂದಿದ್ದು, ಇದರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಾಷ್ಟ್ರವಿರೋಧಿ ಪೋಸ್ಟ್‌ಗಳನ್ನು ಮಾಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿದೆ.

ಲಖನೌ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ, ಹೊಸ ಸಾಮಾಜಿಕ ಮಾಧ್ಯಮ ನೀತಿಯನ್ನು ಜಾರಿಗೆ ತಂದಿದ್ದು, ಇದರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಾಷ್ಟ್ರವಿರೋಧಿ ಪೋಸ್ಟ್‌ಗಳನ್ನು ಮಾಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿದೆ. ಇದರ ಜೊತೆಗೆ ಸರ್ಕಾರದ ಯೋಜನೆಗಳನ್ನು ಪ್ರಚಾರ ಮಾಡುವವರಿಗೆ ಬಂಪರ್‌ ಆಫರ್‌ ಪ್ರಕಟಿಸಿದೆ.

ಹೊಸ ನೀತಿ ಅನ್ವಯ ದೇಶ ವಿರೋಧಿ ಪೋಸ್ಟ್‌ಗೆ 3ರಿಂದ ಜೀವಾವಧಿವರೆಗೆ ಶಿಕ್ಷೆ ವಿಧಿಸಬಹುದಾಗಿರುತ್ತದೆ. ಜೊತೆಗೆ ಯಾವುದೇ ಸಂಸ್ಥೆಗಳು ಆಕ್ಷೇಪಾರ್ಹ, ಅಶ್ಲೀಲ ಮತ್ತು ದೇಶವಿರೋಧಿ ಪೋಸ್ಟ್‌ ಹಾಕಿದರೆ ಅವುಗಳ ವಿರುದ್ಧವೂ ಕಾನೂನು ಕ್ರಮಕ್ಕೆ ಅವಕಾಶ ಕಲ್ಪಿಸುತ್ತದೆ.

ಇನ್ನು ಸರ್ಕಾರದ ಯೋಜನೆಗಳ ಪೋಸ್ಟ್‌ ಜನಪ್ರಿಯಗೊಳಿಸುವ ಜಾಲತಾಣ ಇನ್‌ಫ್ಲ್ಯೂಯೆನ್ಸರ್‌ಗಳು ತಮ್ಮ ಹಿಂಬಾಲಕರು ಮತ್ತು ಚಂದಾದಾರರ ಸಂಖ್ಯೆ ಆದಾರದ ಮೇಲೆ ಮಾಸಿಕ 2 - 8 ಲಕ್ಷ ರು. ಆದಾಯ ಪಡೆಯಬಹುದಾಗಿದೆ.

ಎಕ್ಸ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನಲ್ಲಿ ಗರಿಷ್ಠ ಪಾವತಿ ಮಿತಿ ಕ್ರಮವಾಗಿ 5ಲಕ್ಷ ರು., 4 ಲಕ್ಷ ರು, 3 ಲಕ್ಷ ರು, ಗೆ ಮಿತಿಗೊಳಿಸಲಾಗಿದೆ. ಯುಟ್ಯೂಬ್‌ನಲ್ಲಿ ವಿಡಿಯೋ, ಕಿರುಚಿತ್ರ, ಪಾಡ್‌ಕಾಸ್ಟ್‌ಗಳ ಪಾವತಿ ಮಿತಿಯನ್ನು ಕ್ರಮವಾಗಿ 8 ಲಕ್ಷ ರು. 7 ಲಕ್ಷ ರು. 6 ಲಕ್ಷ ರು. ಮತ್ತು 4 ಲಕ್ಷ ರು. ಗೆ ಸರ್ಕಾರ ಮಿತಿಗೊಳಿಸಿದೆ.