ಉತ್ತರ ಪ್ರದೇಶದ ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ಆಸ್ಪತ್ರೆ ಬೆಂಕಿ : 16 ಮಕ್ಕಳ ಜೀವನ್ಮರಣ ಹೋರಾಟ

| Published : Nov 17 2024, 01:19 AM IST / Updated: Nov 17 2024, 05:11 AM IST

ಉತ್ತರ ಪ್ರದೇಶದ ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ಆಸ್ಪತ್ರೆ ಬೆಂಕಿ : 16 ಮಕ್ಕಳ ಜೀವನ್ಮರಣ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಪ್ರದೇಶದ ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ವಾರ್ಡ್‌ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ 10 ಮಕ್ಕಳು ಸಾವಿಗೀಡಾದ ಬೆನ್ನಲ್ಲೇ, ಗಾಯಗೊಂಡಿರುವ 16 ಮಕ್ಕಳು ಜೀವನ್ಮರಣ ಹೋರಾಟ ನಡೆಸುತ್ತಿವೆ.  

 ಲಖನೌ/ಝಾನ್ಸಿ : ಉತ್ತರ ಪ್ರದೇಶದ ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ವಾರ್ಡ್‌ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ 10 ಮಕ್ಕಳು ಸಾವಿಗೀಡಾದ ಬೆನ್ನಲ್ಲೇ, ಗಾಯಗೊಂಡಿರುವ 16 ಮಕ್ಕಳು ಜೀವನ್ಮರಣ ಹೋರಾಟ ನಡೆಸುತ್ತಿವೆ. ವೈದ್ಯರು ಈ ಮಕ್ಕಳ ರಕ್ಷಿಸಲು ಶತಾಯ ಗತಾಯ ಯತ್ನಿಸುತ್ತಿದ್ದಾರೆ.

ಎಲೆಕ್ಟ್ರಿಕ್‌ ಶಾರ್ಟ್‌ ಸರ್ಕೀಟ್‌ನಿಂದ ಸಾವು ಸಂಭವಿಸಿರಬಹುದು ಎನ್ನಲಾಗುತ್ತಿದೆ. ಈ ಸಂಬಂಧ 3 ಹಂತದ ತನಿಖೆ ನಡೆಯಲಿದೆ. ಝಾನ್ಸಿ ಉಪವಿಭಾಗಾಧಿಕಾರಿಗಳು, ಜಿಲ್ಲಾ ಮ್ಯಾಜಿಸ್ಟ್ರೇಟರು ಹಾಗೂ ಅಗ್ನಿಶಾಮಕ ಇಲಾಖೆಗಳು ಪ್ರತ್ಯೇಕ ತನಿಖೆ ನಡೆಸಲಿವೆ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಬೃಜೇಶ್ ಪಾಠಕ್‌ ಶನಿವಾರ ಹೇಳಿದ್ದಾರೆ.

ಈ ನಡುವೆ, ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆಘಾತ ವ್ಯಕ್ತಪಡಿಸಿದ್ದು, ಪ್ರತ್ಯೇಕವಾಹಿ ತಲಾ 2 ಲಕ್ಷ ರು. ಹಾಗೂ 5 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ.

ಮತ್ತೊಂದೆಡೆ ಮೃತ ಮಕ್ಕಳ ಬಂಧುಗಳು ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಅಗ್ನಿಶಾಮಕ ವ್ಯವಸ್ಥೆ ವೈಫಲ್ಯವೇ ದುರಂತಕ್ಕೆ ಕಾರಣ?

ಝಾನ್ಸಿ: ಬುಂದೇಲಖಂಡದ ಅತಿದೊಡ್ಡ ಆಸ್ಪತ್ರೆ ಎಂದು ಖ್ಯಾತಿ ಪಡೆದಿರುವ ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ಆಸ್ಪತ್ರೆಯಲ್ಲಿ ಅಗ್ನಿ ದುರಂತಕ್ಕೆ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.

ಆಸ್ಪತ್ರೆಯಲ್ಲಿನ ಅಗ್ನಿನಂದಕ ಉಪಕರಣಗಳ ಎಕ್ಸ್ಪೈರಿ ಡೇಟ್‌ ಮುಗಿದಿತ್ತು. ಇನ್ನು ಫೈರ್‌ ಅಲಾರ್ಮ್‌ ವ್ಯವಸ್ಥೆ ಕೂಡ ಕೆಲಸ ಮಾಡುತ್ತಿರಲಿಲ್ಲ. ಇದರಿಂದ ಅಗ್ನಿ ದುರಂತ ಆದ ಕೂಡಲೇ ತ್ವರಿತವಾಗಿ ನಿಯಂತ್ರಣ ಮಾಡಲು ಆಗಲಿಲ್ಲ ಎಂದು ಮೂಲಗಳು ಹೇಳಿವೆ. ಆದರೆ ಅಗ್ನಿಶಾಮಕ ವ್ಯವಸ್ಥೆ ಸರಿಯಾಗಿತ್ತು ಎಂದು ಉ.ಪ್ರ. ಡಿಸಿಎಂ ಬೃಜೇಶ್‌ ಪಾಠಕ್ ಹೇಳಿಕೊಂಡಿದ್ದರೆ.