ಸಾರಾಂಶ
ಶುಕ್ರವಾರ ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ಎನ್‌ಡಿಎ ಮೈತ್ರಿಕೂಟದ ಸಭೆಗೆ ಆಗಮಿಸಿದ್ದ ನರೇಂದ್ರ ಮೋದಿ, ಸಭೆಗೂ ಮುನ್ನ ಸೆಂಟ್ರಲ್ ಹಾಲ್‌ನಲ್ಲಿದ್ದ ಸಂವಿಧಾನವನ್ನು ತಮ್ಮ ಹಣೆಗೆ ಸ್ಪರ್ಶಿಸಿದರು.
ನವದೆಹಲಿ: ಶುಕ್ರವಾರ ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ಎನ್‌ಡಿಎ ಮೈತ್ರಿಕೂಟದ ಸಭೆಗೆ ಆಗಮಿಸಿದ್ದ ನರೇಂದ್ರ ಮೋದಿ, ಸಭೆಗೂ ಮುನ್ನ ಸೆಂಟ್ರಲ್ ಹಾಲ್‌ನಲ್ಲಿದ್ದ ಸಂವಿಧಾನವನ್ನು ತಮ್ಮ ಹಣೆಗೆ ಸ್ಪರ್ಶಿಸಿದರು. ಈ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎಂದು ಎದ್ದಿದ್ದ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದರು.
ಬಳಿಕ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳನ್ನು ಎತ್ತಿ ಹಿಡಿಯಲು ನನ್ನ ಜೀವನದ ಪ್ರತಿಕ್ಷಣವನ್ನು ಮೀಸಲಿಟ್ಟಿರುವೆ. ಬಡತನ ಮತ್ತು ಹಿಂದುಳಿದ ಕುಟುಂಬದಲ್ಲಿ ಜನಿಸಿದ ನನ್ನಂಥ ವ್ಯಕ್ತಿ ರಾಷ್ಟ್ರ ಸೇವೆ ಮಾಡಲು ಸಾಧ್ಯವಾಗಿರುವುದು ಸಂವಿಧಾನದಿಂದ ಮಾತ್ರ. ದೇಶದ ಸಂವಿಧಾನ ಜನರಿಗೆ ಭರವಸೆ, ಶಕ್ತಿ ಮತ್ತು ಘನತೆಯನ್ನು ನೀಡಿದೆ’ ಎಂದು ಬರೆದುಕೊಂಡಿದ್ದಾರೆ.