ಅ.15ರಿಂದ 2000 ರು. ಮೇಲ್ಪಟ್ಟ ಯುಪಿಐ ಪಾವತಿ ಮೇಲೆ ಶೇ.0.4 ರಷ್ಟು ಎಂಡಿಆರ್ ಶುಲ್ಕ ವಿಧಿಸಲು ಮುಂದಾಗಿದ್ದ ಸರ್ಕಾರ, ಜಾರಿ ದಿನಾಂಕವನ್ನು ಮುಂದೂಡುವ ಸಾಧ್ಯತೆಯಿದೆ. ಮುಂದಿನ ವರ್ಷ ಜ.1ರಿಂದ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಬಹುದು ಎಂದು ವರದಿಗಳು ಹೇಳಿವೆ.
ನವದೆಹಲಿ: ಅ.15ರಿಂದ 2000 ರು. ಮೇಲ್ಪಟ್ಟ ಯುಪಿಐ ಪಾವತಿಗಳ ಮೇಲೆ ಶೇ.0.4 ರಷ್ಟು ಎಂಡಿಆರ್ ಶುಲ್ಕ ವಿಧಿಸಲು ಮುಂದಾಗಿದ್ದ ಸರ್ಕಾರ, ಜಾರಿ ದಿನಾಂಕವನ್ನು ಮುಂದೂಡುವ ಸಾಧ್ಯತೆಯಿದೆ. ಮುಂದಿನ ವರ್ಷ ಜ.1ರಿಂದ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಬಹುದು ಎಂದು ವರದಿಗಳು ಹೇಳಿವೆ.
ವರದಿಗಳ ಪ್ರಕಾರ, ಹಬ್ಬದ ಋತುವಿನಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚಿರುವುದರಿಂದ ವ್ಯಾಪಾರಿಗಳು ಮತ್ತು ಪಾವತಿದಾರರಿಗೆ ಹೆಚ್ಚಿನ ಸಮಯವಕಾಶ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರಗೊಂಡಿದೆ ಎನ್ನಲಾಗಿದೆ. ಆದರೆ ದಿನಾಂಕವನ್ನು ಹೊರತುಪಡಿಸಿ ಈಗಾಗಲೇ ಘೋಷಣೆಯಾಗಿರುವ ಎಂಡಿಆರ್ ಶುಲ್ಕದ ನಿಯಮದಲ್ಲಿ ಯಾವುದೇ ಬದಲಿಲ್ಲ ಎಂದು ವರದಿಗಳು ಹೇಳಿವೆ.
ಶೇ.0.4 ಎಂಡಿಆರ್ ಶುಲ್ಕ
ಎಂಡಿಆರ್ ಶುಲ್ಕ ನಿಯಮದಲ್ಲಿ 2000 ರು, ಮೇಲ್ಪಟ್ಟ ಮರ್ಚೆಂಟ್ ಪಾವತಿಗೆ ಶೇ.0.4 ಎಂಡಿಆರ್ ಶುಲ್ಕ ವಿಧಿಸಲಾಗುತ್ತದೆ. 75,000 ರು. ಅಥವಾ ಮೇಲ್ಪಟ್ಟ ಪಾವತಿಯಲ್ಲಿ 300 ರು.ಗೆ ಅದನ್ನು ಮಿತಿಗೊಳಿಸಲಾಗಿದೆ.
ಇತ್ತೀಚೆಗೆ ಈ ವಿಷಯ ಸುಪ್ರೀಂ ಕೋರ್ಟಲ್ಲೂ ವಿಚಾರಣೆಗೆ ಬಂದಿತ್ತು. ಆಗ ಸರ್ಕಾರಕ್ಕೆ ಕೋರ್ಟ್ ನೋಟಿಸ್ ಜಾರಿ ಮಾಡಿತ್ತು.
- ವ್ಯವಸ್ಥೆ ಆರ್ಥಿಕವಾಗಿ ಕಾರ್ಯಸಾಧು ಮಾಡಲು ಯುಪಿಐ ಶುಲ್ಕಕ್ಕೆ ನಿರ್ಧಾರ
- ಅ.15ರಿಂದ 2000 ರು. ಮೇಲ್ಪಟ್ಟ ಪಾವತಿಗೆ ಶೇ.0.4 ಶುಲ್ಕ ಘೋಷಣೆ
- ಆದರೆ ಹಬ್ಬದ ಋತು ಹಿನ್ನೆಲೆಯಲ್ಲಿ ಮುಂದೂಡಿಕೆಗೆ ವರ್ತಕರ ಕೋರಿಕೆ
- ಈ ಹಿನ್ನೆಲೆಯಲ್ಲಿ ಅ.15ರ ಬದಲಿಗೆ 2027ರ ಜ.1ರಿಂದ ಜಾರಿಗೆ ಒಲವು
- ಶುಲ್ಕ ಹೇರಿರುವ ವಿಷಯ ಪ್ರಶ್ನಿಸಿ ಈಗಾಗಲೇ ಸುಪ್ರೀಂಗೂ ಅರ್ಜಿ ಸಲ್ಲಿಕೆ

