ಕೇಂದ್ರ ಬಜೆಟ್ 2024 : ಯುಪಿಎಸ್‌ಸಿ ಪರೀಕ್ಷೆ ನಡೆಸಲು, ನೇಮಕಾತಿಗೆ 200 ಕೋಟಿ ರು. ನಿಗದಿ

| Published : Jul 24 2024, 12:20 AM IST / Updated: Jul 24 2024, 06:59 AM IST

ಸಾರಾಂಶ

ನಾಗರಿಕ ಸೇವೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲು ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆಗೆ 2024-25ರ ಬಜೆಟ್‌ನಲ್ಲಿ 200 ಕೋಟಿ ರು. ನಿಗದಿಪಡಿಸಲಾಗಿದೆ.

ದೆಹಲಿ :  ನಾಗರಿಕ ಸೇವೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲು ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆಗೆ 2024-25ರ ಬಜೆಟ್‌ನಲ್ಲಿ 200 ಕೋಟಿ ರು. ನಿಗದಿಪಡಿಸಲಾಗಿದೆ.

ಪ್ರಸಕ್ತ ಹಣಕಾಸು ವರ್ಷಕ್ಕೆ ಯುಪಿಎಸ್‌ಸಿಗೆ 425.71 ಕೋಟಿ ರೂ.ಗಳನ್ನು ನೀಡಲಾಗಿದ್ದು, ಇದರಲ್ಲಿ 208.99 ಕೋಟಿ ರು. ಅಧ್ಯಕ್ಷರು ಮತ್ತು ಸದಸ್ಯರ ಸಂಬಳ ಹಾಗೂ ಭತ್ಯೆಗೆ ಮೀಸಲಿಡಲಾಗಿದೆ. ಹಾಗೂ ಪರೀಕ್ಷೆಗೆ ಸಂಬಂಧಿಸಿದ ಖರ್ಚುಗಳು, ನೇಮಕಾತಿ ಪರೀಕ್ಷೆಗಳು ಮತ್ತು ಅಭ್ಯರ್ಥಿಗಳ ಆಯ್ಕೆಗೆ 216.72 ಕೋಟಿ ರು. ವ್ಯಯಿಸಲಾಗುವುದು.

2023-24ರಲ್ಲಿ ಆಯೋಗಕ್ಕೆ 426.24 ಕೋಟಿ ರು. ನಿಗದಿಪಡಿಸಲಾಗಿತ್ತು.

ಲೋಕಪಾಲಕ್ಕೆ 33.32 ಕೋಟಿ

ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲದ ಸ್ಥಾಪನೆ ಹಾಗೂ ನಿರ್ಮಾಣಕ್ಕೆ ಸಂಬಂಧಿಸಿದ ಖರ್ಚುಗಳಿಗೆ 2024-25ರಲ್ಲಿ 33.32 ಕೋಟಿ ರು. ನೀಡಲಾಗುವುದು. 2023-24ರಲ್ಲಿ ಮೊದಲಿಗೆ 44.46 ಕೋಟಿ ರು. ನೀಡಲಾಗಿದ್ದು, ಪರಿಷ್ಕರಣೆಯ ನಂತರ ಅದನ್ನು 47.73 ಕೋಟಿ ರು.ಗೆ ಏರಿಕೆ ಮಾಡಲಾಗಿತ್ತು.