ಭಾರತ ಮತ್ತು ಪಾಕಿಸ್ತಾನಕ್ಕೆ ವ್ಯಾಪಾರ ಒಪ್ಪಂದದ ಆಫರ್‌ ನೀಡಿ ಉಭಯ ದೇಶಗಳನ್ನು ಕದನ ವಿರಾಮಕ್ಕೆ ಒಪ್ಪಿಸಿದ್ದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪದೇ ಪದೇ ನೀಡಿದ್ದ ಹೇಳಿಕೆಯನ್ನು ಇದೀಗ ಅಮೆರಿಕದ ಸರ್ಕಾರ ಕೋರ್ಟ್‌ಗೂ ಮಾಹಿತಿ ರೂಪದಲ್ಲಿ ನೀಡಿದೆ.

ನ್ಯೂಯಾರ್ಕ್‌: ಭಾರತ ಮತ್ತು ಪಾಕಿಸ್ತಾನಕ್ಕೆ ವ್ಯಾಪಾರ ಒಪ್ಪಂದದ ಆಫರ್‌ ನೀಡಿ ಉಭಯ ದೇಶಗಳನ್ನು ಕದನ ವಿರಾಮಕ್ಕೆ ಒಪ್ಪಿಸಿದ್ದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪದೇ ಪದೇ ನೀಡಿದ್ದ ಹೇಳಿಕೆಯನ್ನು ಇದೀಗ ಅಮೆರಿಕದ ಸರ್ಕಾರ ಕೋರ್ಟ್‌ಗೂ ಮಾಹಿತಿ ರೂಪದಲ್ಲಿ ನೀಡಿದೆ.

ಟ್ರಂಪ್‌ ಸರ್ಕಾರದ ಪ್ರತಿತೆರಿಗೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್, ‘ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯ ಅಡಿಯಲ್ಲಿ ತಮಗಿರುವ ಅಧಿಕಾರವನ್ನು ಬಳಸಿ ಟ್ರಂಪ್‌, 2 ಅಣುಶಕ್ತ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜತಾಂತ್ರಿಕ ಮಾರ್ಗದ ಮೂಲಕ ಕದನವಿರಾಮ ಘೋಷಣೆಯಾಗುವಂತೆ ಮಾಡಿದ್ದರು. 2 ದೇಶಗಳಿಗೆ ಅಮೆರಿಕದೊಂದಿಗೆ ವ್ಯಾಪಾರ ಮಾಡುವ ಅವಕಾಶ ನೀಡುವುದಾಗಿ ಹೇಳಿ, ಪೂರ್ಣಪ್ರಮಾಣದ ಯುದ್ಧವಾಗುವುದನ್ನು ತಡೆದರು’ ಎಂದು ಹೇಳಿದ್ದಾರೆ.

ಭಾರತ ಉತ್ತರ:

ಅಮೆರಿಕದ ಹೇಳಿಕೆಯನ್ನು ಮತ್ತೊಮ್ಮೆ ಸಾರಾಸಗಟಾಗಿ ತಳ್ಳಿಹಾಕಿರುವ ಭಾರತ, ‘ಕದನವಿರಾಮಕ್ಕೂ ತೆರಿಗೆಗೂ ಯಾವುದೇ ಸಂಬಂಧ ಇಲ್ಲ’ ಎಂದು ಪುನರುಚ್ಚರಿಸಿದೆ.