ಜೆಎಎಸ್‌ಎಸ್‌ಎಂ-ಇಆರ್‌ ಕ್ಷಿಪಣಿ ಪ್ರಯೋಗ ಸಂಭವ

ಮಧ್ಯಪ್ರಾಚ್ಯ ಕದನಕ್ಕೆ ಹೊಸ ತಿರುವಿನ ಸೂಚನೆ2 ಎಫ್‌-35 ಕಳೆದುಕೊಂಡ ಹತಾಶೆ ಇದಕ್ಕೆ ಕಾರಣ?

ಜೆಎಎಸ್‌ಎಸ್‌ಎಂ-ಇಆರ್‌ ಬಳಸಿದರೆ ಇರಾನ್‌ ಶಿಲಾಯುಗಕ್ಕೆ?

ವಿಶ್ವಾದ್ಯಂತವಿದ್ದ ಕ್ಷಿಪಣಿಗಳೀಗ ಗಲ್ಫ್‌ನತ್ತ ದೌಡು, ನಿಯೋಜನೆಸೇನಾ ಹಾನಿಯ ವೆಚ್ಚ ತಗ್ಗಿಸಲೂ ಅಮೆರಿಕಕ್ಕೆ ಈ ಕ್ರಮ ಸಹಕಾರಿ

ಭಯಂಕರ ಮಿಸೈಲ್‌ ಆದ್ರೂ, ಅಮೆರಿಕದಲ್ಲಿ ಸಾಕಷ್ಟು ಸ್ಟಾಕ್‌ ಇಲ್ಲದಿಢೀರ್‌ ಉತ್ಪಾದನೆ ಹೆಚ್ಚಳವೂ ಈಗ ಅಸಾಧ್ಯ


ವಾಷಿಂಗ್ಟನ್‌: ಈಗಾಗಲೇ 5 ವಾರಗಳನ್ನು ಪೂರೈಸಿದ್ದರೂ ಹಳೆ ಹುಮ್ಮಸ್ಸಿನಲ್ಲಿ ಯುದ್ಧವನ್ನು ಮುಂದುವರೆಸಿದ್ದ ಅಮೆರಿಕಕ್ಕೆ, ತನ್ನ ಸೇನೆಯ ಕಿರೀಟದಂತಿದ್ದ 2 ಅತ್ಯಾಧುನಿಕ ಎಫ್‌-35 ಯುದ್ಧವಿಮಾನಗಳಿಗೆ ಹಾನಿಯಾದ ಘಟನೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಹತಾಶೆ ಹಾಗೂ ಕೋಪದಿಂದ ತನ್ನ ಬತ್ತಳಿಕೆಯಲ್ಲಿರುವ ಮಾರಕ ಕ್ಷಿಪಣಿಯನ್ನು ಇರಾನ್‌ ಕಡೆ ತಿರುಗಿಸಿದೆ ಎಂದು ಅಲ್ಲಿನ ಪ್ರತಿಷ್ಠಿತಿ ಸಂಸ್ಥೆ ಬ್ಲೂಂಬರ್ಗ್‌ ವರದಿ ಮಾಡಿದೆ.

ಇತ್ತೀಚೆಗಷ್ಟೇ ಅಧ್ಯಕ್ಷ ಟ್ರಂಪ್‌, ಇರಾನ್‌ಅನ್ನು ಶಿಲಾಯುಗಕ್ಕೆ ಕಳಿಸುವ ಬೆದರಿಕೆ ಹಾಕಿದ್ದರು. ಇದು ತೀವ್ರ ದಾಳಿಯ ಮುನ್ಸೂಚನೆಯಾಗಿತ್ತು. ಇದರ ಬೆನ್ನಲ್ಲೇ, ಜೆಎಎಸ್‌ಎಸ್‌ಎಂ-ಇಆರ್‌ ಎಂಬ ತನ್ನ ದೂರಗಾಮಿ ಸ್ಟೆಲ್ತ್‌ (ರಾಡಾರ್‌ ಕಣ್ಣಿಗೆ ಕಾಣದ) ಕ್ಷಿಪಣಿಯ ಪ್ರಯೋಗಕ್ಕೆ ಸಿದ್ಧತೆಗಳನ್ನು ಆರಂಭಿಸಿದ್ದು, ಪೆಸಿಫಿಕ್‌ ಸೇರಿದಂತೆ ಅನ್ಯ ಪ್ರದೇಶಗಳಲ್ಲಿ ನಿಯೋಜನೆಯಾಗಿದ್ದ ಅವುಗಳನ್ನೀಗ ಮಧ್ಯಪ್ರಾಚ್ಯದ ಕಡೆ ಸಾಗಿಸಬಹುದು ಎನ್ನಲಾಗಿದೆ. ಈ ಕ್ಷಿಪಣಿ ಮಾರಕವೇಕೆ?:

ಜೆಎಎಸ್‌ಎಸ್‌ಎಂ-ಇಆರ್‌ ಎಂಬುದು ಅಮೆರಿಕದ ನೌಕಾಪಡೆ ಮತ್ತು ವಾಯುಪಡೆ ಬಳಸಬಹುದಾದ ಕ್ಷಿಪಣಿಯಾಗಿದ್ದು, ಇದನ್ನು ಯುದ್ಧವಿಮಾನಗಳಿಂದ ಉಡಾವಣೆ ಮಾಡಬಹುದಾಗಿದೆ. ಹಳೆಯ ಜೆಎಎಸ್‌ಎಸ್‌ಎಂಗಿಂತ ಎರಡುಪಟ್ಟು (600 ಮೈಲಿ) ದೂರದ ವರೆಗೆ ತಲುಪುವ ಸಾಮರ್ಥ್ಯ ಇದಕ್ಕಿದೆ. 450 ಕೆ.ಜಿ. ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಇದು ರಾಡಾರ್‌ ಕಣ್ಣಿಗೂ ಬೀಳುವುದಿಲ್ಲ. ಒಂದು ಜೆಎಎಸ್‌ಎಸ್‌ಎಂ-ಇಆರ್‌ನ ಬೆಲೆ 13 ಕೋಟಿ ರು. ಆಗಿದೆ.ಬಳಸಿದರೆ ಲಾಭವೇನು?:

ಇರಾನ್‌ನ ಬಂಕರ್‌, ವಾಯುನೆಲೆ, ಕಮಾಂಡ್ ಕೇಂದ್ರಗಳನ್ನು ಪುಡಿಗಟ್ಟಲು ಯುದ್ಧವಿಮಾನವನ್ನು ಬಳಸಿದರೆ ಅದು ಅಮೆರಿಕಕ್ಕೆ ದುಬಾರಿಯಾಗುತ್ತದೆ. ಜತೆಗೆ, ಅದರ ಮೇಲೆ ದಾಳಿಯಾದರೆ ಒಳಗಿರುವ ಪೈಲಟ್‌ಅನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು. ಆದರೆ ಕ್ಷಿಪಣಿಗಳನ್ನು ಬಳಸುವುದರಿಂದ ಖರ್ಚು ತಗ್ಗುವ ಜತೆಗೆ ಪೈಲಟ್‌ಗಳ ಅಮೂಲ್ಯ ಜೀವಗಳೂ ಉಳಿಯುತ್ತವೆ. ಬಳಕೆ ಮೊದಲಲ್ಲ:

ಅಮೆರಿಕ ಈ ಕ್ಷಿಪಣಿಗಳನ್ನು ಈಗಾಗಲೇ ಇರಾನ್‌ ವಿರುದ್ಧ ಬಳಸಿದೆ. ಯುದ್ಧಾರಂಭವಾದ 4 ವಾರಗಳಲ್ಲಿ ಸುಮಾರು 1000 ಜೆಎಎಸ್‌ಎಸ್‌ಎಂ-ಇಆರ್‌ ಕ್ಷಿಪಣಿಗಳು ಇರಾನ್‌ ವಿರುದ್ಧ ಬಳಕೆಯಾಗಿವೆ. ಪರಿಣಾಮ, ಫೆ.28ಕ್ಕೂ ಮುನ್ನ 2,300 ಇದ್ದ ಇವುಗಳ ಸಂಖ್ಯೆಯೀಗ 425ಕ್ಕೆ ಕುಸಿದಿದೆ. ಇವುಗಳಲ್ಲೂ 75 ಕ್ಷಿಪಣಿಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಪರಿಣಾಮ ಅವುಗಳ ಬಳಕೆ ಸಾಧ್ಯವಾಗದು.

ಅತ್ತ ವರ್ಷಕ್ಕೆ 390ರಷ್ಟು (ತಿಂಗಳಿಗೆ 33) ಉತ್ಪಾದನೆಯಾಗುವ ಇವುಗಳ ತಯಾರಿಕೆಯನ್ನು ವೇಗಗೊಳಿಸುವುದೂ ಸಾಧ್ಯವಿಲ್ಲ.