ಸಾರಾಂಶ
ಶ್ರೀರಾಮ ಪ್ರಾಣಪ್ರತಿಷ್ಠಾಪನೆಗೆ ಎಲ್ಲ ಚತುರಾಮ್ನಾಯ ಶಂಕರಾಚಾರ್ಯ ಪೀಠಗಳು ವಿರೋಧ ವ್ಯಕ್ತಪಡಿಸಿವೆ ಎಂಬುದು ಸರಿಯಲ್ಲ ಎಂದು ವಿಶ್ವ ಹಿಂದೂ ಪರಿಷತ್ ಭಾನುವಾರ ಸ್ಪಷ್ಟಪಡಿಸಿದೆ.
ಅಯೋಧ್ಯೆ: ಶ್ರೀರಾಮ ಪ್ರಾಣಪ್ರತಿಷ್ಠಾಪನೆಗೆ ಎಲ್ಲ ಚತುರಾಮ್ನಾಯ ಶಂಕರಾಚಾರ್ಯ ಪೀಠಗಳು ವಿರೋಧ ವ್ಯಕ್ತಪಡಿಸಿವೆ ಎಂಬುದು ಸರಿಯಲ್ಲ ಎಂದು ವಿಶ್ವ ಹಿಂದೂ ಪರಿಷತ್ ಭಾನುವಾರ ಸ್ಪಷ್ಟಪಡಿಸಿದೆ.
ಈ ಬಗ್ಗೆ ಶೃಂಗೇರಿ ಶ್ರೀಗಳು ಹಾಗೂ ದ್ವಾರಕಾ ಶ್ರೀಗಳು ನೀಡಿದ ಪತ್ರಿಕಾ ಹೇಳಿಕೆ ಲಗತ್ತಿಸಿರುವ ವಿಎಚ್‌ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ‘ಶೃಂಗೇರಿ ಶ್ರೀಗಳು, ದ್ವಾರಕಾ ಶ್ರೀಗಳು ಪ್ರಾಣಪ್ರತಿಷ್ಠಾಪನೆ ಸ್ವಾಗತಿಸಿದ್ದಾರೆ.
ಆದರೂ ಎಲ್ಲ ಶಂಕರಾಚಾರ್ಯರ ವಿರೋಧವಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇದು ಸರಿ ಅಲ್ಲ’ ಎಂದಿದ್ದಾರೆ. 4 ಪೀಠಗಳ ಪೈಕಿ 2 ಪೀಠಗಳ (ಪುರಿ, ಜ್ಯೋತಿರ್ಪೀಠ) ಯತಿಗಳು ಪ್ರಾಣಪ್ರತಿಷ್ಠಾಪನೆಗೆ ಅಪಸ್ವರ ಎತ್ತಿದ್ದದರು.