ಸರ್ಕಾರ ಮಾತ್ರವಲ್ಲ, ಸಂತ್ರಸ್ತರಿಗೂ ಮೇಲ್ಮನವಿ ಅಧಿಕಾರ : ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

| N/A | Published : Aug 26 2025, 01:03 AM IST / Updated: Aug 26 2025, 04:03 AM IST

supreme court
ಸರ್ಕಾರ ಮಾತ್ರವಲ್ಲ, ಸಂತ್ರಸ್ತರಿಗೂ ಮೇಲ್ಮನವಿ ಅಧಿಕಾರ : ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು
Share this Article
  • FB
  • TW
  • Linkdin
  • Email

ಸಾರಾಂಶ

 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾದರೆ ಅವರ ವಿರುದ್ಧ ಸರ್ಕಾರ ಮಾತ್ರ ಮೇಲ್ಮನವಿ ಸಲ್ಲಿಸಬಹುದು ಎಂಬ ನಿಯಮವನ್ನು ಸಂತ್ರಸ್ತರಿಗೂ ವಿಸ್ತರಿಸಿರುವ ಸುಪ್ರೀಂ ಕೋರ್ಟು

 ನವದೆಹಲಿ: ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾದರೆ ಅವರ ವಿರುದ್ಧ ಸರ್ಕಾರ ಮಾತ್ರ ಮೇಲ್ಮನವಿ ಸಲ್ಲಿಸಬಹುದು ಎಂಬ ನಿಯಮವನ್ನು ಸಂತ್ರಸ್ತರಿಗೂ ವಿಸ್ತರಿಸಿರುವ ಸುಪ್ರೀಂ ಕೋರ್ಟು, ಪ್ರಕರಣಗಳಲ್ಲಿ ಸಂತ್ರಸ್ತರಿಗೂ ಸಮಾನ ಅಧಿಕಾರ ಇರುತ್ತದೆ. ಅವರು ಕೂಡ ಖುಲಾಸೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬಹುದು ಎಂಬ ಐತಿಹಾಸಿಕ ತೀರ್ಪು ನೀಡಿದೆ.

ನ್ಯಾ। ನಾಗರತ್ನ ಮತ್ತು ವಿಶ್ವನಾಥನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಮೇಲ್ಮನವಿ ಹಕ್ಕುಗಳನ್ನು ಬಲಿಪಶುಗಳಿಗೆ ಕೂಡ ಔಪಚಾರಿಕವಾಗಿ ವಿಸ್ತರಿಸಿದೆ ಹಾಗೂ ಬಲಿಪಶುಗಳಿಗೂ ಆರೋಪಿಗಳಂತೆಯೇ ಮೇಲ್ಮನವಿ ಸಲ್ಲಿಸುವ ಹಕ್ಕಿರಬೇಕು ಎಂದಿದೆ.

ಈ ಹಿಂದೆ ರಾಜ್ಯ ಸರ್ಕಾರ ಅಥವಾ ದೂರುದಾರರು ಮಾತ್ರ ಆರೋಪಿಗಳ ಖುಲಾಸೆಯನ್ನು ಪ್ರಶ್ನಿಸುವ ವಿಶೇಷ ಹಕ್ಕುಗಳನ್ನು ಹೊಂದಿದ್ದರು. ಆದರೆ ದ್ವಿಸದಸ್ಯ ಪೀಠ 58 ಪುಟಗಳ ತೀರ್ಪಿನಲ್ಲಿ, ‘ಸಿಆರ್‌ಪಿಸಿಯ ಸೆಕ್ಷನ್ 374 ಆರೋಪಿಗಳಿಗೆ ಮೇಲ್ಮನವಿ ಸಲ್ಲಿಸಲು ಅಧಿಕಾರ ನೀಡುತ್ತದೆ. ಇದೇ ವಿಧಿಯು ಸಂತ್ರಸ್ತರಿಗೂ ಮೇಲ್ಮನವಿ ಸಲ್ಲಿಸುವ ಸಮಾನ ಅಧಿಕಾರ ನೀಡುತ್ತದೆ’ ಎಂದಿದೆ.

ಇದೇ ವೇಳೆ, ಮೇಲ್ಮನವಿ ಹಕ್ಕು ವಿಸ್ತರಣೆ ಸಮರ್ಥಿಸಲು ಪೀಠವು ಸಿಆರ್‌ಪಿಸಿ ಸೆಕ್ಷನ್ 372ರ ನಿಬಂಧನೆ ಉಲ್ಲೇಖಿಸಿದೆ.

‘ಅಪರಾಧ ಪ್ರಕರಣಗಳಲ್ಲಿ ಗಾಯಗೊಂಡ ಅಥವಾ ಆಸ್ತಿಪಾಸ್ತಿ ನಷ್ಟ ಅನುಭವಿಸಿದ ಬಲಿಪಶುಗಳು ಈಗ ಖುಲಾಸೆಗೊಂಡವರ ವಿರುದ್ಧ ನೇರವಾಗಿ ಮೇಲ್ಮನವಿ ಸಲ್ಲಿಸಬಹುದು. ವಿಚಾರಣೆ ವೇಳೆ ಬಲಿಪಶು ಸಾವನ್ನಪ್ಪಿದರೆ, ಬಲಿಪಶುವಿನ ಕಾನೂನುಬದ್ಧ ಉತ್ತರಾಧಿಕಾರಿಗಳು ಮೇಲ್ಮನವಿ ಹಾಕಬಹುದು. ದೂರುದಾರರ ಒಳಗೊಳ್ಳುವಿಕೆ ಇಲ್ಲದಿದ್ದರೂ ಸಹ, ರಾಜ್ಯವು ಮೇಲ್ಮನವಿ ನ್ಯಾಯಾಲಯದ ಅನುಮತಿಯೊಂದಿಗೆ ಖುಲಾಸೆಗಳ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು. ಸೆಕ್ಷನ್ 378(4) ರ ಅಡಿಯಲ್ಲಿನ ಕಾರ್ಯವಿಧಾನದ ಅಡಚಣೆಗಳು ಬಲಿಪಶುವಿನ ಮೇಲ್ಮನವಿಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ’ ಎಂದಿದೆ.

ಮಾನದಂಡ ಪಾಲಿಸದೇ ಗಲ್ಲು ಶಿಕ್ಷೆ ಪ್ರಶ್ನಾರ್ಹ : ಸುಪ್ರೀಂ ಕಿಡಿ

ಪಿಟಿಐ ನವದೆಹಲಿತಾನು ಹಾಕಿಕೊಟ್ಟ ಮಾನದಂಡಗಳನ್ನು ಪಾಲಿಸದೇ ನ್ಯಾಯಾಲಯಗಳು ನೀಡಿರುವ ಗಲ್ಲು ಶಿಕ್ಷೆಯನ್ನು ಸಂವಿಧಾನದ ವಿಧಿ 32ರ ಅಡಿ ಮರುಪರಿಶೀಲಿಸಬಹುದಾಗಿದೆ ಹಾಗೂ ಕೋರ್ಟುಗಳಿಗೆ ಆ ಪ್ರಕರಣಗಳನ್ನು ರೀ ಓಪನ್‌ ಮಾಡಲು ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈ ಮೂಲಕ ಮರಣದಂಡನೆ ಶಿಕ್ಷೆಗೊಳಗಾದ ವ್ಯಕ್ತಿಯ ಅರ್ಜಿಯನ್ನು ಮತ್ತೊಮ್ಮೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. 

ನಾಗ್ಪುರದ ವಸಂತ ಸಂಪತ್ ದುಪಾರೆ ಎಂಬಾತ ಏಪ್ರಿಲ್ 2008 ರಲ್ಲಿ 4 ವರ್ಷದ ಮಗುವಿನ ಮೇಲೆ ಅತ್ಯಾ**ರ ನಡೆಸಿ ಕೊಂದ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದ. ಈತ ತನಗೆ ಕೆಳ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆ ಪ್ರಶ್ನಿಸಿದ್ದ. ಇದರ ವಿಚಾರಣೆಗೆ ಒಪ್ಪಿಗೆ ನೀಡಿದ ಸುಪ್ರೀಂ ಕೋರ್ಟ್, ಆರೋಪಿಯ ಮನೋವೈದ್ಯಕೀಯ ಮತ್ತು ಮಾನಸಿಕ ಮೌಲ್ಯಮಾಪನ ವರದಿ ಪಡೆದು ಅದರ ಅನುಸಾರ ಶಿಕ್ಷೆ ವಿಧಿಸಬೇಕು ಎಂದು 2022ರಲ್ಲಿ ಕೋರ್ಟು ಮಾರ್ಗಸೂಚಿ ಹೊರಡಿಸಿತ್ತು. ಅದನ್ನು ಇಲ್ಲಿ ಪಾಲಿಸದೇ ಗಲ್ಲು ಸಜೆ ವಿಧಿಸಲಾಗಿದೆ ಎಂದು ಹೇಳಿ ಮರುವಿಚಾರಣೆ ನಡೆಸಲು ತೀರ್ಮಾನಿಸಿತು.

Read more Articles on