ಮಂಗಳವಾರ ಮಗನ ಹುಟ್ಟು ಹಬ್ಬಕ್ಕೆ ತವರಿಗೆ ಬರಬೇಕಿದ್ದ ಯೋಧ ಹುತಾತ್ಮ

| Published : May 06 2024, 12:31 AM IST / Updated: May 06 2024, 05:56 AM IST

ಮಂಗಳವಾರ ಮಗನ ಹುಟ್ಟು ಹಬ್ಬಕ್ಕೆ ತವರಿಗೆ ಬರಬೇಕಿದ್ದ ಯೋಧ ಹುತಾತ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಪೂಂಛ್‌ ದಾಳಿಯಲ್ಲಿ ಮೃತರಾದ ಐಎಎಫ್‌ ಯೋಧ ವಿಕ್ಕಿ ಪಹಡೆ ಮೂರು ದಿನಗಳ ಬಳಿಕ ಮಗನ ಹುಟ್ಟುಹಬ್ಬಕ್ಕಾಗಿ ಮನೆಗೆ ತೆರಳಲು ಯೋಜಿಸಿದ್ದರು. ಅಷ್ಟರೊಳಗೆ ವಿಧಿ ಅವರನ್ನು ಬಲಿ ಪಡೆದಿದೆ.

ಭೋಪಾಲ್‌: ಕಾಶ್ಮೀರದಲ್ಲಿ ಶನಿವಾರ ಉಗ್ರರ ದಾಳಿಗೆ ಬಲಿಯಾದ ಯೋಧ ವಿಕಿ ಪಹಾಡೆ (33) ಮಧ್ಯಪ್ರದೇಶದ ಛಿಂಡ್ವಾಡಾ ಜಿಲ್ಲೆಯ ನೋನಿಯಾ- ಕರ್ಬಲ್‌ ಗ್ರಾಮದವರು.

ಕಳೆದ ತಿಂಗಳು ನಡೆದ ತಮ್ಮ ಸೋದರಿಯ ವಿವಾಹಕ್ಕಾಗಿ ತವರಿಗೆ ಬಂದು ಹೋಗಿದ್ದ ವಿಕಿ ಅವರ 5 ವರ್ಷದ ಮಗನ ಹುಟ್ಟುಹಬ್ಬ ಮಂಗಳವಾರ ಇತ್ತು.ಅದಕ್ಕೆ ಅವರು ಆಗಮಿಸಿಬೇಕಿತ್ತು. ಆದರೆ ಅದಕ್ಕೂ 3 ದಿನ ಮೊದಲು ವಿಧಿ ಅವರನ್ನು ಬಲಿ ಪಡೆದಿದೆ.

ವಿಕಿ ಅವರು ಪತ್ನಿ, 5 ವರ್ಷದ ಪುತ್ರ, ತಾಯಿ ಮತ್ತು ಮೂವರು ಸೋದರಿಯರನ್ನು ಅಗಲಿದ್ದಾರೆ.