ಸಾರಾಂಶ
ಏರ್ ಇಂಡಿಯಾ ಜತೆಗಿನ ವಿಲೀನ ಹಾಗೂ ಕಮ್ಮಿ ಸಂಬಳ ವಿರೋಧಿಸಿ ಪೈಲಟ್‌ಗಳು ಪ್ರತಿಭಟನೆಗೆ ಇಳಿದ ಬಳಿಕ ಕಂಗೆಟ್ಟಿರುವ ಟಾಟಾ-ಸಿಂಗಾಪುರ ಏರ್‌ಲೈನ್ಸ್ ಜಂಟಿ ಮಾಲೀಕತ್ವದ ‘ವಿಸ್ತಾರ’ ಏರ್‌ಲೈನ್ಸ್, ತನ್ನ ನಿತ್ಯದ ಕಾರ್ಯಾಚರಣೆ ಪೈಕಿ ಶೇ.10ರಷ್ಟು ಅಥವಾ 25-30 ವಿಮಾನ ಸಂಚಾರ ರದ್ದತಿಗೆ ನಿರ್ಧರಿಸಿದೆ
ನವದೆಹಲಿ: ಏರ್ ಇಂಡಿಯಾ ಜತೆಗಿನ ವಿಲೀನ ಹಾಗೂ ಕಮ್ಮಿ ಸಂಬಳ ವಿರೋಧಿಸಿ ಪೈಲಟ್‌ಗಳು ಪ್ರತಿಭಟನೆಗೆ ಇಳಿದ ಬಳಿಕ ಕಂಗೆಟ್ಟಿರುವ ಟಾಟಾ-ಸಿಂಗಾಪುರ ಏರ್‌ಲೈನ್ಸ್ ಜಂಟಿ ಮಾಲೀಕತ್ವದ ‘ವಿಸ್ತಾರ’ ಏರ್‌ಲೈನ್ಸ್, ತನ್ನ ನಿತ್ಯದ ಕಾರ್ಯಾಚರಣೆ ಪೈಕಿ ಶೇ.10ರಷ್ಟು ಅಥವಾ 25-30 ವಿಮಾನ ಸಂಚಾರ ರದ್ದತಿಗೆ ನಿರ್ಧರಿಸಿದೆ.
ಇವು ಹೆಚ್ಚಾಗಿ ದೇಶೀ ವಿಮಾನ ಆಗಿವೆ. ವಿಸ್ತಾರ ನಿತ್ಯ 300 ವಿಮಾನಗಳನ್ನುಈ ಮುಂಚೆ ಹಾರಿಸುತ್ತಿತ್ತು. ಪೈಲಟ್‌ಗಳು ಪ್ರತಿಭಟನೆ ನಡೆಸಿದ ಕಾರಣ ಕಾರ್ಯಾಚರಣೆ ಹೆಚ್ಚೂಕಮ್ಮಿ ನಿಂತಿತ್ತು. ಈಗ ಶೇ.80ರಷ್ಟು ಪೈಲಟ್‌ಗಳು ಕೆಲಸಕ್ಕೆ ಮರಳಿದ್ದಾರೆ ಎನ್ನಲಾಗಿದ್ದು, ಶೇ.10ರಷ್ಟು ವಿಮಾನ ರದ್ದು ಮಾಡಿ ಮಿಕ್ಕ ವಿಮಾನ ಹಾರಾಟಕ್ಕೆ ನಿರ್ಧರಿಸಿದೆ.