ಜೂ.4ಕ್ಕಲ್ಲ, ಜೂ.2ರಂದೇ ಸಿಕ್ಕಿಂ, ಅರುಣಾಚಲ ಅಸೆಂಬ್ಲಿ ಫಲಿತಾಂಶ

| Published : Mar 18 2024, 01:45 AM IST

ಜೂ.4ಕ್ಕಲ್ಲ, ಜೂ.2ರಂದೇ ಸಿಕ್ಕಿಂ, ಅರುಣಾಚಲ ಅಸೆಂಬ್ಲಿ ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಅರುಣಾಚಲಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭೆ ಚುನಾವಣೆಗಳ ಫಲಿತಾಂಶವನ್ನು ಜೂ.2ರಂದೇ ಪ್ರಕಟಿಸುವುದಾಗಿ ಹೇಳಿದೆ.

ನವದೆಹಲಿ: ಲೋಕಸಭೆ ಹಾಗೂ 4 ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಜೂ.4ರಂದು ಪ್ರಕಟವಾಗಲಿದೆ ಎಂದು ಶನಿವಾರವಷ್ಟೇ ಘೋಷಣೆ ಮಾಡಿದ್ದ ಕೇಂದ್ರ ಚುನಾವಣಾ ಆಯೋಗ, ಆ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಿದೆ. ಅರುಣಾಚಲಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭೆ ಚುನಾವಣೆಗಳ ಫಲಿತಾಂಶವನ್ನು ಜೂ.2ರಂದೇ ಪ್ರಕಟಿಸುವುದಾಗಿ ಹೇಳಿದೆ.ಈ ಎರಡೂ ವಿಧಾನಸಭೆಗಳ ಅವಧಿ ಜೂ.2ರಂದು ಮುಕ್ತಾಯವಾಗುತ್ತಿದೆ. ಭಾರತದ ಸಂವಿಧಾನದ 172(1) ಪರಿಚ್ಛೇದದ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 15ರ ಪ್ರಕಾರ, ಒಂದು ವಿಧಾನಸಭೆಯ ಅವಧಿ ಮುಗಿಯುವುದರೊಳಗೆ ಆಯೋಗ ಅಲ್ಲಿ ಚುನಾವಣೆ ಪ್ರಕ್ರಿಯೆ ಮುಗಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆ ದಿನಾಂಕವನ್ನು ಹಿಂದೂಡಲಾಗಿದೆ.ಆದರೆ ಅರುಣಾಚಲಪ್ರದೇಶ ಹಾಗೂ ಸಿಕ್ಕಿಂ ಲೋಕಸಭೆ ಕ್ಷೇತ್ರಗಳಿಗೆ ನಡೆಯುವ ಚುನಾವಣೆ ಫಲಿತಾಂಶ ಈಗಾಗಲೇ ಘೋಷಣೆಯಾಗಿರುವಂತೆ ಜೂ.4ರಂದೇ ಪ್ರಕಟವಾಗಲಿದೆ.ಅರುಣಾಚಲಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭೆಗಳಿಗೆ ಏ.19ರಂದು ಮತದಾನ ನಡೆಯಲಿದೆ. ಇವುಗಳ ಜತೆಗೆ ಆಂಧ್ರಪ್ರದೇಶ (ಮೇ 13) ಹಾಗೂ ಒಡಿಶಾ (ಮೇ 13, 20) ವಿಧಾನಸಭೆಗಳಿಗೂ ಚುನಾವಣೆ ಘೋಷಣೆಯಾಗಿದೆ.