ಕೇರಳದಲ್ಲಿ ಮುಸ್ಲಿಮರಿಗೂ ಕಂಟಕವಾದ ವಕ್ಫ್‌ ಮಂಡಳಿ!

| Published : Nov 13 2024, 12:05 AM IST

ಸಾರಾಂಶ

ಕೇರಳದಲ್ಲಿನ ವಕ್ಫ್‌ ಆಸ್ತಿ ವಿವಾದ ಇದೀಗ ಮುಸ್ಲಿಂ ಕುಟುಂಬಗಳಿಗೂ ಕಂಟಕವಾಗುತ್ತಿದೆ. ಮಂಡಳಿಯು ವಯನಾಡಿನಲ್ಲಿ 4 ಮುಸ್ಲಿಂ ಕುಟುಂಬಗಳಿಗೆ ವಕ್ಫ್‌ ಜಾಗ ಆತಿಕ್ರಮಣದ ಆರೋಪದಲ್ಲಿ ನೋಟಿಸ್‌ ನೀಡಿ, ಶಾಕ್‌ ಕೊಟ್ಟಿದೆ.

ಮಾನಂತವಾಡಿ: ಕೇರಳದಲ್ಲಿನ ವಕ್ಫ್‌ ಆಸ್ತಿ ವಿವಾದ ಇದೀಗ ಮುಸ್ಲಿಂ ಕುಟುಂಬಗಳಿಗೂ ಕಂಟಕವಾಗುತ್ತಿದೆ. ಮಂಡಳಿಯು ವಯನಾಡಿನಲ್ಲಿ 4 ಮುಸ್ಲಿಂ ಕುಟುಂಬಗಳಿಗೆ ವಕ್ಫ್‌ ಜಾಗ ಆತಿಕ್ರಮಣದ ಆರೋಪದಲ್ಲಿ ನೋಟಿಸ್‌ ನೀಡಿ, ಶಾಕ್‌ ಕೊಟ್ಟಿದೆ. ಮತ್ತೊಂದೆಡೆ ಚಾವಕ್ಕಡ್‌ನಲ್ಲಿ ಮುಸ್ಲಿಮರು ಸೇರಿದಂತೆ 37 ಕುಟುಂಬಗಳಿಗೆ ಮಂಡಳಿ ನೋಟಿಸ್‌ ಜಾರಿ ಮಾಡಿದೆ.ವಯನಾಡು ಜಿಲ್ಲೆಯ ಮಾನಂತವಾಡಿ ತಾಲೂಕಿನ ತವಿಂಜಲ್ ಪಂಚಾಯತ್‌ನಲ್ಲಿ 4 ಮುಸ್ಲಿಂ ಕುಟುಂಬಗಳು ಸೇರಿದಂತೆ, 5 ಕುಟುಂಬಗಳಿಗೆ ವಕ್ಫ್‌ ಕಂಟಕ ಎದುರಾಗಿದೆ. ಎಲ್ಲ ಕುಟುಂಬಗಳು ಮಾನ್ಯವಾದ ಹಕ್ಕು ಪತ್ರವನ್ನು ಹೊಂದಿದ್ದರೂ ಕೂಡ ನೋಟಿಸ್‌ ನೀಡಲಾಗಿದೆ.ಮತ್ತೊಂದೆಡೆ ಚಾವಕ್ಕಡ್‌ನಲ್ಲಿ 37 ಕುಟುಂಬಗಳಿಗೆ ಮಂಡಳಿ, ವಕ್ಫ್‌ ಜಾಗ ಅತಿಕ್ರಮಣ ಮಾಡಿರುವ ನೋಟಿಸ್‌ ನೀಡಿದೆ. ಇಲ್ಲಿನ ಮನತಾಳ. ಒರಮನಯೂರ್‌, ಪೂರ್ವ ಒಟ್ಟಾತೆಂಗು, ಪಶ್ಚಿಮ ಜೆಕೆ ಮಾರ್ಬಲ್ಸ್, ತಂಗಲ್ಪಾಡಿ, ಪಲಾಯು ಮತ್ತು ಚಕ್ಕಂಕಂಡಂನಲ್ಲಿ ವಾಸವಿರುವ ಒಟ್ಟು37 ಕುಟುಂಬಗಳಿಗೆ ಮಂಡಳಿಯು ನೋಟಿಸ್‌ ಜಾರಿಗೊಳಿಸಿದ್ದು, ಸುಮಾರು 10 ಎಕರೆ ಪ್ರದೇಶದ ಜಾಗವನ್ನು ವಶಪಡಿಸಿಕೊಳ್ಳಲು ಮುಂದಾಗಿದೆ.