ಕೇಂದ್ರ ಬಜೆಟ್ - 2024 : ಮಹಿಳಾ, ಮಕ್ಕಳ ಕಲ್ಯಾಣಕ್ಕೆ ಶೇ.2.5ರಷ್ಟು ಹೆಚ್ಚಿಗೆ 26092 ಕೋಟಿ ಅನುದಾನ

| Published : Jul 24 2024, 12:19 AM IST / Updated: Jul 24 2024, 07:29 AM IST

ಕೇಂದ್ರ ಬಜೆಟ್ - 2024 : ಮಹಿಳಾ, ಮಕ್ಕಳ ಕಲ್ಯಾಣಕ್ಕೆ ಶೇ.2.5ರಷ್ಟು ಹೆಚ್ಚಿಗೆ 26092 ಕೋಟಿ ಅನುದಾನ
Share this Article
  • FB
  • TW
  • Linkdin
  • Email

ಸಾರಾಂಶ

2023-24ನೇ ಸಾಲಿನ ಬಜೆಟ್‌ಗೆ ಹೋಲಿಸಿದರೆ ಈ ಬಾರಿಯ ಬಜೆಟ್‌ನಲ್ಲಿ ಶೇ.2.5ರಷ್ಟು ಹೆಚ್ಚಿಗೆ ಅನುದಾನವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮೀಸಲಿರಿಸಲಾಗಿದೆ

ನವದೆಹಲಿ :  2023-24ನೇ ಸಾಲಿನ ಬಜೆಟ್‌ಗೆ ಹೋಲಿಸಿದರೆ ಈ ಬಾರಿಯ ಬಜೆಟ್‌ನಲ್ಲಿ ಶೇ.2.5ರಷ್ಟು ಹೆಚ್ಚಿಗೆ ಅನುದಾನವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮೀಸಲಿರಿಸಲಾಗಿದೆ. ಪ್ರಸ್ತಕ ಸಾಲಿನ ಬಜೆಟ್‌ನಲ್ಲಿ 26,092 ಕೋಟಿ ಅನುದಾನ ಹಂಚಿಕೆಯಾಗಿದೆ.

 2023-24ನೇ ಸಾಲಿನ ಬಜೆಟ್‌ನಲ್ಲಿ 25,448 ಕೋಟಿ ಅನುದಾನವನ್ನು ನೀಡಲಾಗಿತ್ತು. ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಏಳಿಗೆಗಾಗಿ, ವಿವಿಧ ಇಲಾಖೆಗಳಲ್ಲಿ ಅವರಿಗೆ ಪ್ರಯೋಜನವಾಗಬೇಕು ಎನ್ನುವ ಕಾರಣಕ್ಕಾಗಿ 3 ಲಕ್ಷ ಕೋಟಿ ರು. ಯೋಜನೆಯನ್ನು ವಿತ್ತ ಸಚಿವೆ ಘೋಷಿಸಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಸ್ತ್ರೀಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಎನ್ನುವ ಕಾರಣಕ್ಕೆ ಉದ್ಯೋಗಿ ವಸತಿ ನಿಲಯಗಳನ್ನು ಸ್ಥಾಪಿಸುವುದಕ್ಕೆ ಮುಂದಾಗಿದೆ. ಮಹಿಳಾ ವಸತಿ ನಿಲಯ ,ಸ್ವಾಧರ್ ಗ್ರೇಹ್‌ ಮತ್ತು ಪ್ರಧಾನಿ ಮಂತ್ರಿ ಮಾತೃ ಯೋಜನೆಗೆ ಬಜೆಟ್‌ನಲ್ಲಿ 2.5ಸಾವಿರ ಕೋಟಿ ಹಣವನ್ನು ನೀಡಲಾಗಿದೆ.

ಸಕ್ಷಮ್ ಅಂಗನವಾಡಿ ಮತ್ತು ಪೋಷಣ್‌ 2.0 , ವಾತ್ಸಲ್ಯ ಮತ್ತು ಶಕ್ತಿ ಮಿಷನ್‌ ಯೋಜನೆಯಡಿಯಲ್ಲಿ ಅಪೌಷ್ಠಿಕತೆ ತಡೆಗಟ್ಟಲು, ಮಕ್ಕಳ ರಕ್ಷಣೆ ಮತ್ತು ಸ್ತ್ರೀ ಸ್ವಾವಲಂಬನೆಗೆ ಅನುದಾನ ನೀಡಲಾಗಿದೆ.ಸಕ್ಷಮ್ ಅಂಗನವಾಡಿ ಮತ್ತು ಪೋಷಣ್‌ 2.0 ಯೋಜನೆಗೆ 21 ಸಾವಿರ ಕೋಟಿ, ವಾತ್ಸಲ್ಯ ಯೋಜನೆಗೆ 1.4 ಸಾವಿರ ಕೋಟಿ ಹಾಗೂ ಶಕ್ತಿ ಮಿಷನ್‌ಗೆ 3.1 ಸಾವಿರ ಕೋಟಿ ರು. ಹಣ ನೀಡಲಾಗಿದೆ. ಉಳಿದಂತೆ ಬೇಟಿ ಬಚಾವೋ ಬೇಟಿ ಫಡಾವೋ ಯೋಜನೆ ಮತ್ತು ಮಹಿಳಾ ಸುರಕ್ಷತೆಗೆ 629 ಕೋಟಿ ರು ಅನುದಾನವನ್ನು ನೀಡಲಾಗಿದೆ.

ಇದರ ಜೊತೆಗೆ ಕೇಂದ್ರ ಆಯವ್ಯಯದಲ್ಲಿ ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ,ಕೇಂದ್ರ ದತ್ತು ನಿಧಿಗೆ ಬಜೆಟ್‌ನಲ್ಲಿ ಅನುದಾನವನ್ನು ಹೆಚ್ಚಿಸಲಾಗಿದೆ,ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿ ಸಮಸ್ಥೆಗೆ 88.8 ಕೋಟಿ, ಸಂಸ್ಥೆ, ದತ್ತು ನಿಧಿಗೆ 11.4 ಕೋಟಿ ಅನುದಾನ ಹಂಚಿಕೆಯಾಗಿದೆ. ಉಳಿದಂತೆ ಯೂನಿಸೆಫ್‌ ಯೋಜನೆಗೆ 5.60 ಕೋಟಿ, ನಿರ್ಭಯಾ ನಿಧಿಗೆ 500 ಕೋಟಿ ರು. ನೀಡಲಾಗಿದೆ