ಸಾರಾಂಶ
ಪಹಲ್ಗಾಂ ಉಗ್ರ ದಾಳಿ ಬಳಿಕ ಭಾರತದ ಜತೆಗೆ ಸಂಘರ್ಷದ ಆತಂಕ ಹೆಚ್ಚುತ್ತಿರುವ ನಡುವೆಯೇ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಮತ್ತೆ ತಮ್ಮ ನಾಲಗೆ ಹರಿಬಿಟ್ಟಿದ್ದಾರೆ.
- ಪಾಕಿಸ್ತಾನದ ರಕ್ಷಣಾ ಸಚಿವನಿಂದ ಮತ್ತೆ ಬೆದರಿಕೆ ತಂತ್ರ
- ನಾವು ಉಳಿಯದಿದ್ರೆ ಯಾರೂ ಉಳಿಯಲ್ಲವೆಂಬ ಬೆದರಿಕೆಇಸ್ಲಾಮಾಬಾದ್: ಪಹಲ್ಗಾಂ ಉಗ್ರ ದಾಳಿ ಬಳಿಕ ಭಾರತದ ಜತೆಗೆ ಸಂಘರ್ಷದ ಆತಂಕ ಹೆಚ್ಚುತ್ತಿರುವ ನಡುವೆಯೇ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಮತ್ತೆ ತಮ್ಮ ನಾಲಗೆ ಹರಿಬಿಟ್ಟಿದ್ದಾರೆ. ಒಂದು ವೇಳೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ಯಾರೂ ಬದುಕುಳಿಯಲ್ಲ. ಒಂದಾ ನಾವು ಬದುಕುಳಿಯಬೇಕು, ಇಲ್ಲವಾದರೆ ಎಲ್ಲರೂ ಸಾಯಬೇಕು ಎಂದು ಬೆದರಿಕೆ ಹಾಕಿದ್ದಾರೆ.
ಒಂದು ವೇಳೆ ಪಾಕಿಸ್ತಾನದ ಅಸ್ವಿತ್ವದ ಪ್ರಶ್ನೆ ಎದುರಾದರೆ ವಿಶ್ವದಲ್ಲಿ ಯಾರೂ ಬದುಕುಳಿಯಲ್ಲ ಎಂದು ಸಚಿವ ತಿಳಿಸಿದ್ದಾರೆ.
ಸದ್ಯದ ಪರಿಸ್ಥಿತಿಯನ್ನು ಗಾಜಾದದಲ್ಲಿ ಇಸ್ರೇಲ್‌ನ ಮಿಲಿಟರಿ ದಾಳಿಗೆ ಹೋಲಿಸಿರುವ ಸಚಿವ ಆಸಿಫ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಮಿತ್ರರು ಇದೇ ಮನಸ್ಥಿತಿಯನ್ನು ಅನುಸರಿಸುತ್ತಿದ್ದಾರೆ. ಒಂದು ವೇಳೆ ಪಾಕಿಸ್ತಾನಕ್ಕೂ ಅದೇ ಸ್ಥಿತಿ ಬಂದರೆ, ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾದರೆ ಒಂದಾ ನಾವು ಬದುಕುಳಿಯಬೇಕು ಅಥವಾ ಎಲ್ಲರೂ ಸಾಯಬೇಕು ಎಂದು ಎಂದರು.+++
ಪಹಲ್ಗಾಂ ಉಗ್ರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ದಿನೇ ದಿನೆ ಯುದ್ಧಾಂತಕ ಹೆಚ್ಚಾಗುತ್ತಿದೆ. ಭಾರತದ ದಾಳಿಯಿಂದ ಬೆದರಿರುವ ಪಾಕಿಸ್ತಾನವು ಯುದ್ಧನಿಲ್ಲಿಸಲು ವಿಶ್ವ ನಾಯಕರ ಕೈಕಾಲು ಹಿಡಿಯುತ್ತಿದೆ. ಇಷ್ಟಾದರೂ ಅಲ್ಲಿನ ನಾಯಕರು ಮಾತ್ರ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಭಾರತವನ್ನು ಬೆದರಿಸುವ ಪ್ರಯತ್ನ ನಡೆಸುತ್ತಿದ್ದಾರೆ.