ಕಾಂಗ್ರೆಸ್‌ ಗ್ಯಾರಂಟಿಗೆ ಬೇಕು ವರ್ಷಕ್ಕೆ 1 ಲಕ್ಷ ಕೋಟಿ ರು.!

| Published : Apr 12 2024, 01:01 AM IST / Updated: Apr 12 2024, 05:04 AM IST

ಕಾಂಗ್ರೆಸ್‌ ಗ್ಯಾರಂಟಿಗೆ ಬೇಕು ವರ್ಷಕ್ಕೆ 1 ಲಕ್ಷ ಕೋಟಿ ರು.!
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಪಕ್ಷವು ಲೋಕಸಭೆ ಚುನಾವಣೆ ಜಯಿಸಲು, ಕರ್ನಾಟಕದಲ್ಲಿ ಹಾಗೂ ತೆಲಂಗಾಣದಲ್ಲಿ ಆರಂಭಿಕ ಯಶ ಕಂಡಿರುವ 5 ಗ್ಯಾರಂಟಿಗಳನ್ನು ದೇಶಾದ್ಯಂತ ವಿಸ್ತರಿಸಲು ತೀರ್ಮಾನಿಸಿದೆ.

ನವದೆಹಲಿ: ಕಾಂಗ್ರೆಸ್ ಪಕ್ಷವು ಲೋಕಸಭೆ ಚುನಾವಣೆ ಜಯಿಸಲು, ಕರ್ನಾಟಕದಲ್ಲಿ ಹಾಗೂ ತೆಲಂಗಾಣದಲ್ಲಿ ಆರಂಭಿಕ ಯಶ ಕಂಡಿರುವ 5 ಗ್ಯಾರಂಟಿಗಳನ್ನು ದೇಶಾದ್ಯಂತ ವಿಸ್ತರಿಸಲು ತೀರ್ಮಾನಿಸಿದೆ. ಹಾಗಿದ್ದಾಗ ‘5 ನ್ಯಾಯಗಳು’ ಹೆಸರಿನ ಈ ಗ್ಯಾರಂಟಿಗಳು ದೇಶದ ಬೊಕ್ಕಸಕ್ಕೆ ಇದು ಎಷ್ಟು ಹೊರೆ ತಂದಾವು ಎಂಬ ಪ್ರಶ್ನೆ ಕಾಡದೇ ಇರದು. 

ಈ ಬಗ್ಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ ಸದಸ್ಯ ಪ್ರವೀಣ್ ಚಕ್ರವರ್ತಿ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ. 5 ವರ್ಷದಲ್ಲಿ 5-6 ಲಕ್ಷ ಕೋಟಿ ರು. ಈ ಯೋಜನೆಗೆ ತಗಲಬಹುದು. ಇದರರ್ಥ ಕಾಂಗ್ರೆಸ್ ಸರ್ಕಾರವು ತನ್ನ 5 ಭರವಸೆಗಳನ್ನು ಜಾರಿಗೆ ತರಲು ವರ್ಷಕ್ಕೆ ಸುಮಾರು 1.2 ಲಕ್ಷ ಕೋಟಿ ರು. ವಿನಿಯೋಗಿಸಬೇಕಾಗುತ್ತದೆ ಎಂದಿದ್ದಾರೆ. 

ಪ್ರೊಫೆಷನಲ್ಸ್ ಕಾಂಗ್ರೆಸ್ ಮತ್ತು ಡೇಟಾ ಅನಾಲಿಟಿಕ್ಸ್ ಅಧ್ಯಕ್ಷರೂ ಆದ ಪ್ರವೀಣ್ ಚಕ್ರವರ್ತಿ ಈ ಬಗ್ಗೆ ವಿವರ ನೀಡಿ, ‘ಒಟ್ಟು ಬಡವರ ಸಂಖ್ಯೆಯ ಬಗ್ಗೆ ಪಕ್ಷವು ಯಾವುದೇ ಇತ್ತೀಚಿನ ಡೇಟಾವನ್ನು ಹೊಂದಿಲ್ಲ. ಆದರೆ ಕಲ್ಯಾಣ ಯೋಜನೆಗಳ ಅಂದಾಜು ವೆಚ್ಚವು 5 ವರ್ಷಕ್ಕೆ 5-6 ಲಕ್ಷ ಕೋಟಿ ರು. ಆಗಬಹುದು’ ಎಂದರು.‘ಆದರೂ ಬಡವರ ಸಂಖ್ಯೆ ಬಗ್ಗೆ ಕಾಂಗ್ರೆಸ್‌ ಇತ್ತೀಚಿನ ಡೇಡಾ ಹೊಂದಿಲ್ಲ ಎಂದು ಚಕ್ರವರ್ತಿ ಹೇಳಿದ್ದನ್ನು ಹಲವರು ಪ್ರಶ್ನಿಸಿದ್ದು, ಹೇಗೆ ಬರೀ ಅಂದಾಜಿನ ಮೇರೆಗೆ ಪಕ್ಷ ಇದನ್ನು ಪ್ರಕಟಿಸಿದೆ’ ಎಂದು ಕೇಳಿದ್ದಾರೆ.

ಕಾಂಗ್ರೆಸ್‌ 5 ಗ್ಯಾರಂಟಿಗಳು

1. ನಿರುದ್ಯೋಗಿಗಳಿಗೆ ಅಪ್ರೆಂಟಿಸ್‌ ಕೆಲಸ ಕೊಡಿಸಿ ವರ್ಷಕ್ಕೆ 1 ಲಕ್ಷ ರು.

2. ಎಸ್ಸಿ ಎಸ್ಟಿ ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರು,

3. ದೇಶಾದ್ಯಂತ ಕೃಷಿ ಸಾಲ ಮನ್ನಾ (ಎಷ್ಟು ಮನ್ನಾ ಎಂಬ ಅಂಕಿ ಇಲ್ಲ)

4. ವಿದ್ಯಾರ್ಥಿ ಸಾಲ ಮನ್ನಾ

5. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಲೀಗಲ್‌ ಗ್ಯಾರಂಟಿ