ರಾವಲ್ಪಿಂಡಿಯ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನು ಜೈಲಿನಲ್ಲಿಯೇ ಹತ್ಯೆ ಮಾಡಲಾಗಿದೆ ಎಂಬ ವದಂತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ನಡುವೆ ಇಮ್ರಾನ್‌ನರನ್ನು ಕಾಣಲು ಬಂದ ಸಹೋದರಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಇಸ್ಲಾಮಾಬಾದ್: ರಾವಲ್ಪಿಂಡಿಯ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನು ಜೈಲಿನಲ್ಲಿಯೇ ಹತ್ಯೆ ಮಾಡಲಾಗಿದೆ ಎಂಬ ವದಂತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ನಡುವೆ ಇಮ್ರಾನ್‌ನರನ್ನು ಕಾಣಲು ಬಂದ ಸಹೋದರಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಥಳಿಸಿ ಹತ್ಯೆ ಮಾಡಲಾಗಿದೆ ಎನ್ನುವ ವದಂತಿ
ಇಲ್ಲಿನ ಡಿಯಾಲಾ ಜೈಲಿನಲ್ಲಿ ಇಮ್ರಾನ್ ಖಾನ್ ಥಳಿಸಿ ಹತ್ಯೆ ಮಾಡಲಾಗಿದೆ ಎನ್ನುವ ವದಂತಿ ಹರಿದಾಡಿದ್ದು, ಆಪ್ಘನ್‌ನ ಕೆಲವು ಸುದ್ದಿಸಂಸ್ಥೆಗಳು ಈ ಬಗ್ಗೆ ವರದಿ ಮಾಡಿವೆ. ಸುದ್ದಿ ವೈರಲ್ ಆಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಇಮ್ರಾನ್ ಬೆಂಬಲಿಗರು ರಾವಲ್ಪಿಂಡಿ ಜೈಲಿಗೆ ನುಗಿದ್ದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ವದಂತಿಗಳ ಬಗ್ಗೆ ಪಾಕ್ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಹೋದರನ ಕಾಣಲು ಅವಕಾಶ ನೀಡಿಲ್ಲ
ಮತ್ತೊಂದೆಡೆ ತಮ್ಮ ಸಹೋದರನ ಕಾಣಲು ಹಲವು ವಾರಗಳಿಂದ ಪ್ರಯತ್ನಿಸಿದರೂ ಅವಕಾಶ ನೀಡಿಲ್ಲ. ಜೈಲಿನಲ್ಲಿಯೇ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಇಮ್ರಾನ್ ಖಾನ್ ಮೂವರು ಸಹೋದರಿಯರು ಆರೋಪಿಸಿದ್ದಾರೆ. ಜತೆಗೆ ವದಂತಿ ಹಿನ್ನೆಲೆ ಸಹೋದರನ ಕಾಣಲು ಜೈಲಿಗೆ ಹೋಗಿದ್ದಾಗ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
