ತ.ನಾಡಿನ ಲಾಟರಿ ಕಿಂಗ್‌ ಅತಿದೊಡ್ಡ ದೇಣಿಗೆದಾರ?

| Published : Mar 16 2024, 01:49 AM IST / Updated: Mar 16 2024, 07:27 AM IST

ಸಾರಾಂಶ

ತಮಿಳುನಾಡಿನ ಲಾಟರಿ ಕಿಂಗ್ ಎಂದೇ ಕುಖ್ಯಾತಿ ಹೊಂದಿರುವ ಸ್ಯಾಂಟಿಗೋ ಮಾರ್ಟಿನ್‌ ಒಡೆತನದ ಫ್ಯೂಚರ್‌ ಗೇಮಿಂಗ್‌ ಅ್ಯಂಡ್‌ ಹೋಟೆಲ್‌ ಸರ್ವೀಸಸ್ ಪ್ರೈವೆಟ್‌ ಲಿಮಿಟೆಡ್‌, ವಿವಿಧ ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚಿನ ದೇಣಿಗೆ ನೀಡಿದ ಸಂಸ್ಥೆಯಾಗಿ ಹೊರಹೊಮ್ಮಿದೆ.

ನವದೆಹಲಿ: ತಮಿಳುನಾಡಿನ ಲಾಟರಿ ಕಿಂಗ್ ಎಂದೇ ಕುಖ್ಯಾತಿ ಹೊಂದಿರುವ ಸ್ಯಾಂಟಿಗೋ ಮಾರ್ಟಿನ್‌ ಒಡೆತನದ ಫ್ಯೂಚರ್‌ ಗೇಮಿಂಗ್‌ ಅ್ಯಂಡ್‌ ಹೋಟೆಲ್‌ ಸರ್ವೀಸಸ್ ಪ್ರೈವೆಟ್‌ ಲಿಮಿಟೆಡ್‌, ವಿವಿಧ ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚಿನ ದೇಣಿಗೆ ನೀಡಿದ ಸಂಸ್ಥೆಯಾಗಿ ಹೊರಹೊಮ್ಮಿದೆ. ಚುನಾವಣಾ ಆಯೋಗಕ್ಕೆ ಎಸ್‌ಬಿಐ ಸಲ್ಲಿಸಿರುವ ಮಾಹಿತಿಯಲ್ಲಿ ಈ ಅಂಶವಿದೆ.

ಯಾರು ಈ ಲಾಟರಿ ಕಿಂಗ್‌?
ತಮಿಳುನಾಡಿನಲ್ಲಿ ಲಾಟರಿ ಕಿಂಗ್‌ ಎಂದೇ ಕುಖ್ಯಾತನಾಗಿರುವ ಸ್ಯಾಂಟಿಗೋ ಮಾರ್ಟಿನ್‌ 1988ರಲ್ಲಿ ಮ್ಯಾನ್ಮಾರ್‌ನಿಂದ ತಮಿಳುನಾಡಿಗೆ ಬಂದು ಲಾಟರಿ ವ್ಯವಹಾರ ಆರಂಭಿಸಿದ್ದ. ಕ್ರಮೇಣ ಅದನ್ನು ಕರ್ನಾಟಕ, ಕೇರಳ ಹಾಗೂ ಈಶಾನ್ಯ ರಾಜ್ಯಗಳಿಗೆ ವಿಸ್ತರಿಸಿದ್ದ. 

2003ರಲ್ಲಿ ತಮಿಳುನಾಡು ಸರ್ಕಾರ ಲಾಟರಿ ನಿಷೇಧಿಸಿದರೂ ಅಕ್ರಮವಾಗಿ ತನ್ನ ಚಟುವಟಿಕೆ ಮುಂದುವರಿಸಿ ಮಾರ್ಟಿನ್‌ ಲಾಟರಿ ಎಂಬ ಹೆಸರಿನಲ್ಲಿ ಕುಖ್ಯಾತನಾಗಿದ್ದ. 

ಬಳಿಕ ತನ್ನ ಲಾಟರಿ ಜಾಲವನ್ನು ವ್ಯವಹಾರವನ್ನು ಭೂತಾನ್‌, ನೇಪಾಳಕ್ಕೂ ವಿಸ್ತರಿಸಿ, ಕೆಲ ಸಮಯದಿಂದ ಕ್ಯಾಸಿನೋಗಳನ್ನೂ ನಡೆಸುತ್ತಿದ್ದಾನೆ.

ತನಿಖೆಗೆ ಆದೇಶ ಬಳಿಕ ಸರಣಿ ಬಾಂಡ್‌ ಖರೀದಿ!
ಸ್ಯಾಂಟಿಗೋ ಮಾರ್ಟಿನ್‌ ಒಡೆತನದ ಫ್ಯೂಚರ್‌ ಗೇಮಿಂಗ್‌ ಕಂಪನಿ ಸರ್ಕಾರದ ಲಾಟರಿ ಟಿಕೆಟ್‌ಗಳನ್ನು ಅನಧಿಕೃತವಾಗಿ ಪ್ರಿಂಟ್‌ ಮಾಡಿ ನಷ್ಟ ಉಂಟು ಮಾಡುತ್ತಿದ್ದುದರ ಕುರಿತು ಲಾಟರಿ ವ್ಯವಹಾರ ನಡೆಸುತ್ತಿದ್ದ ಎಂಟು ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ 2019ರಲ್ಲಿ ಎಚ್ಚರಿಸಿತ್ತು.

ಅಚ್ಚರಿ ಎಂದರೆ ಈ ಎಚ್ಚರಿಕೆ ಬಳಿಕ ಆತ ಭಾರೀ ಪ್ರಮಾಣದಲ್ಲಿ ಬಾಂಡ್‌ ಖರೀದಿ ಮಾಡಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ್ದಾನೆ. ಹೀಗಾಗಿ ಆತ ತನಿಖೆಯಿಂದ ತಪ್ಪಿಸಿಕೊಳ್ಳಲು ದೇಣಿಗೆ ನೀಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. 

ಇ.ಡಿ. ಈತನ ಸಲ್ಲಿಸಿರುವ ಚಾರ್ಜ್‌ಶೀಟ್‌ನಂತೆ ಈತ ಸಿಕ್ಕಿಂ ಸರ್ಕಾರಕ್ಕೆ ಲಾಟರಿ ಟಿಕೆಟ್‌ ಮಾರಾಟ ಮಾಡುವ ಮೂಲಕ 910 ಕೋಟಿ ರು. ನಷ್ಟ ಉಂಟು ಮಾಡಿದ್ದ.