ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ ಓಟದ ಬಗ್ಗೆ ದಿಗ್ಗಜ ಓಟಗಾರ್ತಿ ದಲೀಲ್ಹಾ ಮೆಚ್ಚುಗೆ

| N/A | Published : Apr 25 2025, 12:30 AM IST / Updated: Apr 25 2025, 06:19 AM IST

ಸಾರಾಂಶ

ಮಹಿಳೆಯರ 400 ಮೀ. ಹರ್ಡಲ್ಸ್‌ನ ಮಾಜಿ ಒಲಿಂಪಿಕ್‌, ವಿಶ್ವ ಚಾಂಪಿಯನ್‌, ಅಮೆರಿಕದ ದಲೀಲ್ಹಾ ಮುಹಮದ್‌ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ ಓಟದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 ಬೆಂಗಳೂರು : ಮಹಿಳೆಯರ 400 ಮೀ. ಹರ್ಡಲ್ಸ್‌ನ ಮಾಜಿ ಒಲಿಂಪಿಕ್‌, ವಿಶ್ವ ಚಾಂಪಿಯನ್‌, ಅಮೆರಿಕದ ದಲೀಲ್ಹಾ ಮುಹಮದ್‌ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ ಓಟದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕೂಟದ ಅಂ.ರಾ. ರಾಯಭಾರಿಯಾಗಿ ಬೆಂಗಳೂರಿಗೆ ಆಗಮಿಸಿರುವ ದಲೀಲ್ಹಾ, ಮಾಧ್ಯಮಗಳ ಜೊತೆ ತಮ್ಮ ಅನುಭವ ಹಂಚಿಕೊಂಡರು. ವಿಧಾನಸೌಧದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ದಿಗ್ಗಜ ಓಟಗಾರ್ತಿ, ‘ಭಾರತಕ್ಕೆ ಇದು ನನ್ನ ಮೊದಲ ಭೇಟಿ. ಓಟವನ್ನು ಸಂಭ್ರಮಿಸುವ, ಸಾವಿರಾರು ಜನರನ್ನು ಒಟ್ಟು ಸೇರಿಸುವ ಈ ಕೂಟದಲ್ಲಿ ಭಾಗಿಯಾಗಿರುವುದು ಬಹಳ ಖುಷಿ ನೀಡುತ್ತಿದೆ. ಬೆಂಗಳೂರು 10ಕೆ ಮ್ಯಾರಥಾನ್‌ ವೀಕ್ಷಿಸಲು ಉತ್ಸುಕಳಾಗಿದ್ದೇನೆ’ ಎಂದರು.

400 ಮೀ. ಹರ್ಡಲ್ಸ್‌ನಲ್ಲಿ ದಲೀಲ್ಹಾ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ, 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದರು. 2019ರಲ್ಲಿ ವಿಶ್ವ ಚಾಂಪಿಯನ್‌ ಆಗಿದ್ದ ಅವರು, ಕೆಲ ಕಾಲ ವಿಶ್ವ ದಾಖಲೆಯನ್ನೂ ತಮ್ಮ ಹೆಸರಿನಲ್ಲಿ ಹೊಂದಿದ್ದರು. ಕ್ಯಾಪ್ಷನ್‌

ವಿಧಾನಸೌಧದ ಮುಂದೆ ಅಮೆರಿಕದ ದಿಗ್ಗಜ ಅಥ್ಲೀಟ್ ದಲೀಲ್ಹಾ ಮುಹಮದ್‌.