ಸಾರಾಂಶ
ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳಾ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅಲ್ಜೀರಿಯಾದ ಇಮಾನೆ ಖೆಲಿಫ್. ಪುರುಷ ಎನ್ನುವುದು ವರದಿ ಹೊರಬಂದ ಬಳಿಕ ಚಿನ್ನದ ಪದಕ ವಾಪಸ್?
ಪ್ಯಾರಿಸ್: ಇತ್ತೀಚೆಗೆ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳಾ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅಲ್ಜೀರಿಯಾದ ಇಮಾನೆ ಖೆಲಿಫ್ ಒಬ್ಬ ಪುರುಷ ಎನ್ನುವುದು ವೈದ್ಯಕೀಯ ತಪಾಸಣೆ ಮೂಲಕ ದೃಢಪಟ್ಟಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ಯಾರಿಸ್ ಹಾಗೂ ಅಲ್ಜೀರಿಯಾದ ರಾಜಧಾನಿ ಆಲ್ಜೀರ್ಸ್‌ನ ಆಸ್ಪತ್ರೆಗಳಲ್ಲಿ ಇಮಾನೆಯ ದೇಹದ ಸಂಪೂರ್ಣ ಪರೀಕ್ಷೆ ನಡೆಸಲಾಗಿತ್ತು. ಆ ವರದಿಗಳಲ್ಲಿರುವ ಅಂಶಗಳು ಮಾಧ್ಯಮಗಳಿಗೆ ದೊರೆತಿದ್ದು, ಅದರಲ್ಲಿ ಇಮಾನೆ ಒಬ್ಬ ಪುರುಷ ಎಂದು ಸ್ಪಷ್ಟಪಡಿಸಲಾಗಿದೆ ಎನ್ನಲಾಗಿದೆ. ಈ ವರದಿಗಳು ಹೊರಬಿದ್ದ ಬೆನ್ನಲ್ಲೇ ಇಮಾನೆ ಗೆದ್ದಿದ್ದ ಚಿನ್ನದ ಪದಕವನ್ನು ಹಿಂಪಡೆಯಬೇಕು ಎನ್ನುವ ಕೂಗು ಸಾಮಾಜಿಕ ತಾಣಗಳಲ್ಲಿ ಶುರುವಾಗಿದೆ.