ಸಾರಾಂಶ
ನವದೆಹಲಿ : ತಮ್ಮ ಮಹತ್ವಾಕಾಂಕ್ಷಿ ಉದ್ಯೋಗ ಸೃಷ್ಟಿ ಆಂದೋಲನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ 51,000ಕ್ಕೂ ಹೆಚ್ಚು ಜನರಿಗೆ ಕೇಂದ್ರ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ ವಿತರಿಸಿದರು.
ಶುಕ್ರವಾರ ನಡೆದ 17ನೇ ರೋಜಗಾರ್ ಮೇಳದಲ್ಲಿ ನೇಮಕಾತಿ ಪತ್ರಗಳನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದ ಮೋದಿ, ಈ ಸಂಖ್ಯೆಯಿಂದಾಗಿ ಒಟ್ಟು ಉದ್ಯೋಗಾವಕಾಶದ ಸಂಖ್ಯೆಯು 11 ಲಕ್ಷಕ್ಕೆ ತಲುಪಿದೆ ಎಂದು ತಿಳಿಸಿದರು. ಮೂರು ವರ್ಷಗಳಿಂದ ರೋಜಗಾರ್ ಮೇಳ ನಡೆಯುತ್ತಿದೆ.
‘ಭರವಸೆ ಮತ್ತು ವಿಶ್ವಾಸದಿಂದಾಗಿ ನಾವು ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನುಗ್ಗುತ್ತಿದ್ದೇವೆ. ನಮ್ಮ ವಿದೇಶಿ ನೀತಿಗಳನ್ನು ಸಹ ಭಾರತೀಯ ಯುವಕರ ಅಭಿರುಚಿಗೆ ಅನುಗುಣವಾಗಿ ರೂಪಿಸಲಾಗುತ್ತಿದೆ. ಇಂದಿನ ಜಾಗತಿಕ ಒಪ್ಪಂದಗಳು ಯುವಕರ ತರಬೇತಿ ಮತ್ತು ಉದ್ಯೋಗ ಸೃಷ್ಟಿಯ ಉದ್ದೇಶ ಹೊಂದಿವೆ’ ಎಂದು ಹೇಳಿದರು.
‘ಜಿಎಸ್ಟಿ ಇಳಿಕೆ ನಂತರ ಖರೀದಿ ಹೆಚ್ಚುತ್ತಿದೆ ಹಾಗೂ ಕಾರ್ಖಾನೆಗಳ ಉತ್ಪಾದನೆಯೂ ಏರುತ್ತಿದೆ. ಇದು ಹೊಸ ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ. ಜಿಎಸ್ಟಿ ಬಚತ್ ಉತ್ಸವವು ಉದ್ಯೋಗ ಹಬ್ಬವಾಗಿಯೂ ರೂಪಾಂತರಗೊಳ್ಳುತ್ತಿದೆ’ ಎಂದು ಹೇಳಿದರು.
ಜುಲೈನಲ್ಲಿ ನಡೆದ 16ನೇ ಉದ್ಯೋಗ ಮೇಳದಲ್ಲಿಯೂ ಸಹ ಪ್ರಧಾನಿ ಮೋದಿ 51,000 ಜನರಿಗೆ ನೇಮಕಾತಿ ಪತ್ರವನ್ನು ವಿತರಿಸಿದ್ದರು.
)
;Resize=(128,128))
;Resize=(128,128))
;Resize=(128,128))
;Resize=(128,128))