ಸಾರಾಂಶ
ನವದೆಹಲಿ : ನರೇಂದ್ರ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮತ್ತು ದಾಖಲೆಯ ಏಳನೇ ಆಯವ್ಯಯವನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಈ ಬಾರಿಯ ಒಟ್ಟು ಬಜೆಟ್ ಗಾತ್ರ 48 ಲಕ್ಷ ಕೋಟಿ ರು. 2023ರ ಆರ್ಥಿಕ ವರ್ಷಕ್ಕಿಂತ ಈ ಬಾರಿ ಬಜೆಟ್ ಗಾತ್ರದಲ್ಲಿ ಸುಮಾರು 3 ಲಕ್ಷ ಕೋಟಿ ರು ಏರಿಕೆಯಾಗಿದೆ.
ಕಳೆದ ಸಲ ನಿರ್ಮಲಾ ಸೀತಾರಾಮನ್ 45 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದರು.ಸಾಲಗಳನ್ನು ಹೊರತು ಪಡಿಸಿ ಒಟ್ಟು ವೆಚ್ಚ 32.07 ಲಕ್ಷ ಕೋಟಿ ಮತ್ತು 48.21 ಲಕ್ಷ ಕೋಟಿಯಿರಬಹುದು ಎಂದು ಬಜೆಟ್‌ನಲ್ಲಿ ಹೇಳಿದ್ದಾರೆ.
ನಿವ್ವಳ ತೆರಿಗೆ ಸ್ವೀಕೃತಿ 25.83 ಲಕ್ಷಕೋಟಿ ಎಂದು ಅಂದಾಜಿಸಲಾಗಿದೆ. ವಿತ್ತೀಯ ಕೊರತೆಯ ಜಿಡಿಪಿಯ ಶೇ. 4.9ರಷ್ಟು ತಲುಪಬಹುದು ಎಂದು ಬಜೆಟ್‌ನಲ್ಲಿ ಅಂದಾಜಿಸಲಾಗಿದೆ. ನಿವ್ವಳ ಮಾರುಕಟ್ಟೆ ಸಾಲಗಳು ಅಂದಾಜು 2024-25ರ ವರ್ಷಕ್ಕೆ 14.01 ಲಕ್ಷ ಕೋಟಿ ಮತ್ತು 11.63 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಈ ಎರಡೂ ಪ್ರಮಾಣ 2023- 24ನೇ ಸಾಲಿನ ಆರ್ಥಿಕ ವರ್ಷಕ್ಕಿಂತ ಕಡಿಮೆಯಿದೆ. ವಿತ್ತೀಯ ಕೊರತೆಯ ಶೇ.4.5 ಕ್ಕೆ ತಲುಪಿಸುವ ಗುರಿಯನ್ನು ಹಾಕಿಕೊಂಡಿರುವುದಾಗಿ ಸಚಿವೆ ಹೇಳಿದ್ದಾರೆ.