2002ರಲ್ಲಿ ಗೋಧ್ರಾದಲ್ಲಿ ಕರಸೇವಕರಿದ್ದ ರೈಲಿಗೆ ಬೆಂಕಿ ಹಚ್ಚಿದ ಬಳಿಕ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದ ಕಾಂಗ್ರೆಸ್‌ ಸಂಸದ ಎಹ್ಸಾನ್‌ ಜಾಫ್ರಿ ಅವರ ಪತ್ನಿ ಝಾಕಿಯಾ ಝಾಪ್ರಿ (86) ಶನಿವಾರ ಇಲ್ಲಿ ನಿಧನರಾದರು.

ಅಹಮದಾಬಾದ್‌: 2002ರಲ್ಲಿ ಗೋಧ್ರಾದಲ್ಲಿ ಕರಸೇವಕರಿದ್ದ ರೈಲಿಗೆ ಬೆಂಕಿ ಹಚ್ಚಿದ ಬಳಿಕ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದ ಕಾಂಗ್ರೆಸ್‌ ಸಂಸದ ಎಹ್ಸಾನ್‌ ಜಾಫ್ರಿ ಅವರ ಪತ್ನಿ ಝಾಕಿಯಾ ಝಾಪ್ರಿ (86) ಶನಿವಾರ ಇಲ್ಲಿ ನಿಧನರಾದರು.

 ತಮ್ಮ ಪುತ್ರಿಯ ಮನೆಗೆ ತೆರಳಿದ್ದ ಝಾಕಿಯಾ, ಅಲ್ಲಿ ಪುತ್ರಿಯೊಂದಿಗೆ ಮಾತನಾಡುವ ವೇಳೆ ಸಾವನ್ನಪ್ಪಿದ್ದಾರೆ. ತಮ್ಮ ಪತಿ ಸಾವಿಗೆ ಹಲವು ಬಿಜೆಪಿ ನಾಯಕರೇ ಕಾರಣ ಎಂದು ಆರೋಪಿಸಿ ಝಾಕಿಯಾ ಸುದೀರ್ಘ ಕಾನೂನು ಹೋರಾಟದ ಮೂಲಕ ಸುದ್ದಿಯಲ್ಲಿದ್ದರು.