ತರೀಕೆರೆ ಪಟ್ಟಣದ ಉದ್ಯಾನವನ, ಕೆರೆಗಳ ಅಭಿವೃದ್ಧಿಗೆ ₹ 5 ಕೋಟಿ: ಶಾಸಕ ಜಿ.ಎಚ್.ಶ್ರೀನಿವಾಸ್

| Published : Jun 25 2024, 12:39 AM IST

ತರೀಕೆರೆ ಪಟ್ಟಣದ ಉದ್ಯಾನವನ, ಕೆರೆಗಳ ಅಭಿವೃದ್ಧಿಗೆ ₹ 5 ಕೋಟಿ: ಶಾಸಕ ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಪಟ್ಟಣದ ಉದ್ಯಾನವನ ಮತ್ತು ಕೆರೆಗಳ ಅಭಿವೃದ್ಧಿಗಾಗಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಪುರಸಭೆಗೆ ಐದು ಕೋಟಿ ರು. ಮಂಜೂರು ಮಾಡಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ತರೀಕೆರೆ ಪುರಸಭೆ ಸದಸ್ಯರಿಂದ ಚಂಡಿಗಡಕ್ಕೆ ಅಡಳಿತ ಮತ್ತು ಸ್ವಚ್ಚತೆ ಕುರಿತು ಅಧ್ಯಯನ ಪ್ರವಾಸ

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದ ಉದ್ಯಾನವನ ಮತ್ತು ಕೆರೆಗಳ ಅಭಿವೃದ್ಧಿಗಾಗಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಪುರಸಭೆಗೆ ಐದು ಕೋಟಿ ರು. ಮಂಜೂರು ಮಾಡಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ಪುರಸಭಾ ಕಾರ್ಯಾಲಯದಿಂದ ಚಂಢೀಗಡಕ್ಕೆ ಆಡಳಿತ ಮತ್ತು ಸ್ವಚ್ಛತೆ ಕುರಿತು ಅಧ್ಯಯನ ಪ್ರವಾಸಕ್ಕೆ ತೆರಳುವ ಪುರಸಭಾ ಸದಸ್ಯರಿಗೆ ಸೋಮವಾರ ಶುಭ ಕೋರಲು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಸಿರು ನಿಶಾನೆ ತೋರಿಸಿ ಶುಭ ಕೋರಿ ಮಾತನಾಡಿದರು. ಪ್ರವಾಸ ಸಮಯದಲ್ಲಿ ಪುರಸಭೆ ಸದಸ್ಯರು ಅಲ್ಲಿನ ಆಡಳಿತ ಮತ್ತು ಸ್ವಚ್ಛತೆ ಕುರಿತು ಪ್ರತ್ಯಕ್ಷ ದರ್ಶನ ಮತ್ತು ಚರ್ಚೆ ಮೂಲಕ ಪೂರ್ಣ ಅಧ್ಯಯನ ಮಾಡಬೇಕು. ಅಧ್ಯಯವ ಪ್ರವಾಸದಿಂದ ಜನತೆಗೆ ಒಳ್ಳೆಯದಾಗಬೇಕು ಎಂದು ತಿಳಿಸಿದರು.

ಪುರಸಭೆ ಸದಸ್ಯ ಟಿ.ಜೆ.ಲೋಕೇಶ್ ಅವರು ಮಾತನಾಡಿ ಪ್ರಥಮ ಬಾರಿಗೆ ಇಂತಹ ಪ್ರವಾಸವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ ಇದೊಂದು ವಿನೂತನ ಪ್ರಯೋಗವಾಗಿದೆ. ತರೀಕೆರೆ ಪುರಸಭೆ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ರಾಜ್ಯದಲ್ಲಿ ಮೂರನೆ ಸ್ಥಾನ ಪಡೆದಿದ್ದು, ಚಂಢೀಗಡ ಅಧ್ಯಯನ ಪ್ರವಾಸದಿಂದ ಪಟ್ಟಣ ವನ್ನು ಸ್ವಚ್ಛನಗರವನ್ನಾಗಿ ಮಾಡಲು ಇನ್ನು ಒಂದು ಹೆಜ್ಜೆ ಮುಂದಡಿ ಇಡಬಹುದು ಎಂದು ತಿಳಿಸಿದರು.

ಪುರಸಭೆ ಸದಸ್ಯರು ಟಿ.ದಾದಾಪೀರ್ ಈ ಅಧ್ಯಯನ ಪ್ರವಾಸದಿಂದ ಪಟ್ಟಣದ ಸ್ವಚ್ಛತೆ ನಿರ್ವಹಣೆಗೆ ಸಹಕಾರಿ ಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕು ಎಂದು ಅಭಿಪ್ರಾಯಪಟ್ಟರು.

ಪುರಸಭೆ ಮುಖ್ಯಾಧಿಕಾರಿ ಪ್ರಶಾಂತ್ ಮಾತನಾಡಿ ಆಡಳಿತ ಮತ್ತು ಸ್ವಚ್ಛತೆ ಕುರಿತು ಹೆಚ್ಚಿನ ಆಧುನಿಕ ಮಾಹಿತಿ ಪಡೆಯಲು ಪುರಸಭೆ ಸದಸ್ಯರಿಗೆ ಚಂಢೀಗಡಕ್ಕೆ ಅಧ್ಯಯನ ಪ್ರವಾಸ ಆಯೋಸಲಾಗಿದೆ ಎಂದು ಹೇಳಿದರು.

ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಪುರಸಭೆ ಸದಸ್ಯರಿಗೆ ಶುಭ ಕೋರಿದರು. ಪುರಸಭೆ ಸದಸ್ಯರು, ಮುಖಂಡರಾದ ಗಿರಿರಾಜ್, ಪುರಸಭೆ ಪರಿಸರ ಅಭಿಯಂತರರಾದ ತಾಹಿರ ತಸ್ನೀಮ್ ಮತ್ತಿತರರು ಭಾಗವಹಿಸಿದ್ದರು.24ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಪುರಸಭೆ ಕಾರ್ಯಾಲಯದಿಂದ ಪುರಸಭೆ ಸದಸ್ಯರಿಗೆ ಏರ್ಪಡಿಸಿದ್ದ ಚಂಢೀಗಡ ಅಧ್ಯಯನ ಪ್ರವಾಸಕ್ಕೆ ಶಾಸಕ ಜಿ.ಎಚ್. ಶ್ರೀನಿವಾಸ್ ಶುಭ ಕೋರಿದರು. ಪುರಸಭೆ ಸದಸ್ಯರು, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಮುಖಂಡ ಗಿರಿರಾಜ್, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಪುರಸಭೆ ಪರಿಸರ ಅಭಿಯಂತರರಾದ ತಾಹಿರ ತಸ್ನೀಮ್ ಮತ್ತಿತರರು ಇದ್ದರು.