ಹೊಳಲ್ಕೆರೆ ಪ್ರಥಮ ದರ್ಜೆ ಕಾಲೇಜಿಗೆ ₹ 5 ಕೋಟಿ ಅನುದಾನ

| Published : Jun 22 2024, 12:47 AM IST

ಹೊಳಲ್ಕೆರೆ ಪ್ರಥಮ ದರ್ಜೆ ಕಾಲೇಜಿಗೆ ₹ 5 ಕೋಟಿ ಅನುದಾನ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳಲ್ಕೆರೆ, ಪ್ರಧಾನ ಮಂತ್ರಿ ಉಚ್ಛತರ್‌ ಶಿಕ್ಷಾ ಅಭಿಯಾನ ಯೋಜನೆಯಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 5 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಪ್ರಧಾನ ಮಂತ್ರಿ ಉಚ್ಛತರ್‌ ಶಿಕ್ಷಾ ಅಭಿಯಾನ ಯೋಜನೆಯಲ್ಲಿ ಮಂಜೂರು - ಶಾಸಕ ಎಂ. ಚಂದ್ರಪ್ಪ

ಕನ್ನಡಪ್ರಭವಾರ್ತೆ ಹೊಳಲ್ಕೆರೆ

ಪ್ರಧಾನ ಮಂತ್ರಿ ಉಚ್ಛತರ್‌ ಶಿಕ್ಷಾ ಅಭಿಯಾನ ಯೋಜನೆಯಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 5 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು .

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿ, ಕೇಂದ್ರದ ಅನುದಾನದಲ್ಲಿ ಹೆಚ್ಚುವರಿ ಕೊಠಡಿಗಳು, ಕ್ಯಾಂಟೀನ್‌, ಉಪನ್ಯಾಸಕರ ಕೊಠಡಿ, ವಿದ್ಯಾರ್ಥಿನಿಯರ ಶೌಚಾಲಯ, ಲ್ಯಾಬ್‌ ನಿರ್ಮಿಸಲಾಗುವುದು. ಪ್ರಥಮ ದರ್ಜೆ ಕಾಲೇಜಿಗೆ ಎಲ್ಲಾ ಮೂಲಸೌಕರ್ಯ ಕಲ್ಲಿಸಲಾಗಿದೆ. ಕಾಲೇಜಿಗೆ ಹೊಂದಿಕೊಂಡಂತೆ ಒಳಾಂಗಣ ಕ್ರೀಡಾಂಗಣ, ಹೊರಾಂಗಣ ಕೀಡಾಂಗಣ, ಈಜುಕೊಳ ನಿರ್ಮಿಸಲಾಗಿದೆ ಎಂದು ಹೇಳಿದರು.

ಕಾಲೇಜಿಗೆ ಹೆಚ್ಚು ವಿದ್ಯಾರ್ಥಿಗಳು ದಾಖಲಾಗುವಂತೆ ಮಾಡಬೇಕು. ಪರಿಣಾಮಕಾರಿ ಬೋಧನೆ ಮೂಲಕ ಉತ್ತಮ ಫಲಿತಾಂಶ ಪಡೆದರೆ ದಾಖಲಾತಿ ಹೆಚ್ಚುತ್ತದೆ. ಕಾಲೇಜಿನಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭಿಸಬೇಕು. ಕಂಪ್ಯೂಟರ್‌ ಸೈನ್ಸ್‌ ಸೇರಿ ಇನ್ನೂ ಹೆಚ್ಚು ಕೋರ್ಸ್‌ ಆರಂಭಿಸಬೇಕು ಎಂದು ಅವರು ಸೂಚಿಸಿದರು.

ಕಾಲೇಜು ಅಭಿವೃದ್ಧಿಗೆ ವಿದ್ಯಾರ್ಥಿಗಳಿಂದ ವಂತಿಗೆ ಸಂಗ್ರಹ, ಗುತ್ತಿಗೆ ನೌಕರರ ಮುಂದುವರಿಕೆ ಹಾಗೂ ಅವರಿಗೆ ಗೌರವ ಧನ ನೀಡುವುದು. ವಿದ್ಯುತ್‌, ದೂರವಾಣಿ ಬಿಲ್‌ ಪಾವತಿ, ಕಾಲೇಜು ಅವರಣದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಪುರಸಭೆ ಸದಸ್ಯರಾದ ಮುರುಗೇಶ್‌, ಮಲ್ಲಿಕಾರ್ಜುನ್‌, ಆಶೋಕ್‌, ಬಸವರಾಜ ಯಾದವ್‌, ಸಿದ್ದರಾಮಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮರುಳುಸಿದ್ದಪ್ಪ, ಡಿ.ಸಿ ಮೋಹನ್‌, ಎ.ಎಸ್‌. ವೀಣಾ, ಪ್ರಾಂಶುಪಾಲರಾದ ಡಿ.ಆರ್‌. ಹನುಮಂತರಾಯ ಮತ್ತು ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.----------------

21ಎಚ್‌ಎಲ್‌ಕೆ1ಹೊಳಲ್ಕೆರೆ ಸರ್ಕಾರಿ ಪ್ರಧಮ ದರ್ಜೆ ಕಾಲೇಜಿನಲ್ಲಿ ನಡೆದ ಕಾಲೇಜು ಅಭಿವದ್ಧಿ ಸಮಿತಿ ಸಭೆಯಲ್ಲಿ ಶಾಸಕ ಡಾ. ಎಂ. ಚಂದ್ರಪ್ಪ ಮಾತನಾಡಿದರು.