ಅಪಘಾತ: ದಂಪತಿ ಸೇರಿ 6 ಜನರ ಸಾವು

| Published : Oct 17 2023, 12:30 AM IST

ಸಾರಾಂಶ

ಅಫಜಲ್ಪುರ ಪಟ್ಟಣದಿಂದ ಟಾಟಾ ಸುಮೋ ವಾಹನದಲ್ಲಿ ದಂಪತಿ ಸಹಿತ 9 ಜನರು ಶಿರಹಟ್ಟಿಯ ಫಕೀರೇಶ್ವರರ ದರ್ಶನಕ್ಕೆಂದು ಹೋಗುತ್ತಿದ್ದವರು ವಾಯುವ್ಯ ಸಾರಿಗೆಯ ಬಸ್ಸಿಗೆ ಡಿಕ್ಕಿಯಾದ ಪರಿಣಾಮ ದಂಪತಿ ಸೇರಿ 6 ಜನ ಸ್ಥಳದಲ್ಲಿ ಮೃತ ಪಟ್ಟಿರುವ ಘಟನೆ ಗದಗ ಹುಬ್ಬಳ್ಳಿ ಹೆದ್ದಾರಿಯ ನೆರೆಗಲ್‌- ಗದ್ದಿಹಳ್ಳದ ಬಳಿ ಸೋಮವಾರ ಜರುಗಿದೆ.
ದೇವರ ದರ್ಶನಕ್ಕೆಂದು ಹೋದವರು ಮರಳಿ ಮನೆಗೆ ಬರಲಿಲ್ಲ ಚವಡಾಪುರ: ಅಫಜಲ್ಪುರ ಪಟ್ಟಣದಿಂದ ಟಾಟಾ ಸುಮೋ ವಾಹನದಲ್ಲಿ ದಂಪತಿ ಸಹಿತ 9 ಜನರು ಶಿರಹಟ್ಟಿಯ ಫಕೀರೇಶ್ವರರ ದರ್ಶನಕ್ಕೆಂದು ಹೋಗುತ್ತಿದ್ದವರು ವಾಯುವ್ಯ ಸಾರಿಗೆಯ ಬಸ್ಸಿಗೆ ಡಿಕ್ಕಿಯಾದ ಪರಿಣಾಮ ದಂಪತಿ ಸೇರಿ 6 ಜನ ಸ್ಥಳದಲ್ಲಿ ಮೃತ ಪಟ್ಟಿರುವ ಘಟನೆ ಗದಗ ಹುಬ್ಬಳ್ಳಿ ಹೆದ್ದಾರಿಯ ನೆರೆಗಲ್‌- ಗದ್ದಿಹಳ್ಳದ ಬಳಿ ಸೋಮವಾರ ಜರುಗಿದೆ. ಅಫಜಲ್ಪುರ ಪಟ್ಟಣದ ಮೃತ ಸಚೀನ್‌ ಕತ್ತಿ (32) ದಾಕ್ಷಾಯಿಣಿ ಸಚೀನ್‌ (30), ಆಳಂದ ತಾಲೂಕಿನ ಮಾದನ ಹಿಪ್ಪರಗಾದ ಸಂಬಂಧಿಗಳಾದ ಶಿವಕುಮಾರ ಕಲಶೆಟ್ಟಿ (50), ಚಂದ್ರಕಲಾ ಕಲಶೆಟ್ಟಿ (42), ರಾಣಿ ಕಲಶೆಟ್ಟಿ (32) ಹಾಗೂ ದಿಂಗಾಲೇಶ (5) ಈ ಅಪಘಾದಲ್ಲಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಉಳಿದ ಮೂರು ಜನರನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸುದ್ದಿ ತಿಳಿದು ಅಫಜಲ್ಪುರ ಪಟ್ಟಣದ ಸಚಿನ ಅವರ ನಿವಾಸದಲ್ಲಿ ನಿರವ ಮೌನ ಆವರಿಸಿದೆ. ಅಫಜಲ್ಪುರ ಪಟ್ಟಣದ ಪ್ರಸಿದ್ದ ಕಣ್ಣಿ ಗ್ಯಾರೇಜ್‌ ಸಚಿನ ಕತ್ತಿ ಅವರಿಗೆ ಸೇರಿದ್ದು ಅವರ ಸಾವಿನ ಸುದ್ದಿ ಕೇಳಿದ ಕೆಲಸಗಾರರು ಕೂಡ ದಿಗ್ಭ್ರಾಂತರಾಗಿದ್ದಾರೆ.