ಇಲ್ಲಿನ ಭದ್ರಗಿರಿಯ ಶ್ರೀ ವೀರವಿಠ್ಠಲ ದೇವರ ಸನ್ನಿಧಿಯಲ್ಲಿ ಅಧಿಕ ಜ್ಯೇಷ್ಠ ಮಾಸದ ಪ್ರಯುಕ್ತ ಮೇ 17ರಿಂದ ಆರಂಭಗೊಂಡಿದ್ದು ಜೂ. 17ರ ವರೆಗೆ ವಿಶೇಷ ಭಜನಾ ಮಹೋತ್ಸವ ನಡೆಯಲಿದೆ. ಅದರಂತೆ ಪ್ರತೀ ದಿನ ಸಂಜೆ 4 ರಿಂದ 6 ರ ತನಕ ವಿವಿಧ ಆಮಂತ್ರಿತ ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಸಲಾಗುವುದು.
ಉಡುಪಿ: ಇಲ್ಲಿನ ಭದ್ರಗಿರಿಯ ಶ್ರೀ ವೀರವಿಠ್ಠಲ ದೇವರ ಸನ್ನಿಧಿಯಲ್ಲಿ ಅಧಿಕ ಜ್ಯೇಷ್ಠ ಮಾಸದ ಪ್ರಯುಕ್ತ ಮೇ 17ರಿಂದ ಆರಂಭಗೊಂಡಿದ್ದು ಜೂ. 17ರ ವರೆಗೆ ವಿಶೇಷ ಭಜನಾ ಮಹೋತ್ಸವ ನಡೆಯಲಿದೆ. ಅದರಂತೆ ಪ್ರತೀ ದಿನ ಸಂಜೆ 4 ರಿಂದ 6 ರ ತನಕ ವಿವಿಧ ಆಮಂತ್ರಿತ ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಸಲಾಗುವುದು. ಭಾನುವಾರ ಈ ಪುರುಷೋತ್ತಮ ಮಾಸ ಭಜನಾ ಮಹೋತ್ಸವದ ಮೊದಲ ದಿನ ಕಾರ್ಯಕ್ರಮವನ್ನು ಹಿರಿಯರಿಂದ ದೇವತಾ ಪ್ರಾರ್ಥನೆ, ದೀಪಪ್ರಜ್ವಲನೆಯೊಂದಿಗೆ ನಡೆಸಲಾಯಿತು. ನಂತರ ಭದ್ರಗಿರಿ ಶ್ರೀ ವೀರವಿಠ್ಠಲ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ಮತ್ತು ಸೇವಾದಾರರಾದ ಭದ್ರಗಿರಿ ಪಾಂಡುರಂಗ ಆಚಾರ್ಯ, ಅರ್ಚಕರಾದ ಸದಾನಂದ ಆಚಾರ್ಯ, ವಿಶ್ವಸ್ತ ಮಂಡಳಿಯ ಸದಸ್ಯರಾದ ಕೆ. ಸಿ. ಪ್ರಭು, ಗಣೇಶ ಪೈ, ಕೆ.ಪಾಂಡುರಂಗ ಕಿಣಿ, ಗಿರಿಧರ ರಾವ್, ಸುರೇಶ ಶೆಣೈ, ಭಾಸ್ಕರ ಶೆಣೈ, ಸಿ. ಕೃಷ್ಣ ಪೈ, ಸಿ. ರತ್ನಾಕರ ಪೈ, ದೇವದಾಸ ನಾಯಕ್, ರಾಧಾ ಕಾಮತ್ ಮತ್ತಿತರ ಭಕ್ತಾದಿಗಳು ಭಾಗವಹಿಸಿದ್ದರು.