ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಕರವೇ ಮನವಿ

| Published : Jan 29 2024, 01:31 AM IST

ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಕರವೇ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಹತ್ತರಗಿ ಟೋಲ್ ಹಾಗೂ ಅದರ ಬಳಿಯ ಮಳಿಗೆಗಳಲ್ಲಿ ಕನ್ನಡ ನಾಮ ಫಲಕ ಅಳವಡಿಸುವಂತೆ ಟೋಲ್‌ ನಾಕಾ ವ್ಯವಸ್ಥಾಪಕ ಶಿವಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಯಮಕನಮರಡಿ: ಹತ್ತರಗಿ ಟೋಲ್ ನಾಕಾ ಹಾಗೂ ಅದರ ಸುತ್ತಲಿನ ಮಳಿಗೆಗಳಲ್ಲಿ ರಾಜ್ಯ ಸರ್ಕಾರದ ಕನ್ನಡದಲ್ಲೆ ನಾಮಫಲಕಗಳ ಅಳವಡಿಕೆಯ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ಕರವೇ ಜಿಲ್ಲಾ ಉಪಾಧ್ಯಕ್ಷ ರಾಜು ನಾಶಿಪುಡಿ ಹೇಳಿದರು. ಅವರು ಭಾನುವಾರ ಹತ್ತರಗಿ ಟೋಲ್ ನಾಕಾ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ಹತ್ತರಗಿ ಟೋಲ್ ಹಾಗೂ ಅದರ ಬಳಿಯ ಮಳಿಗೆಗಳಲ್ಲಿ ಕನ್ನಡ ನಾಮ ಫಲಕ ಅಳವಡಿಸುವಂತೆ ಟೋಲ್‌ ನಾಕಾ ವ್ಯವಸ್ಥಾಪಕ ಶಿವಕುಮಾರ ಅವರಿಗೆ ಮನವಿ ಸಲ್ಲಿಸಿ, 15 ದಿನಗಳಲ್ಲಿ ಕನ್ನಡದಲ್ಲಿ ನಾಮಫಲಕಗಳ ಅಳವಡಿಕೆಗೆ ಕೋರಲಾಗಿದೆ. ಒಂದು ವೇಳೆ ಕನ್ನಡ ಫಲಕ ಅಳವಡಿಸದಿದ್ದಲ್ಲಿ ಉಗ್ರ ಹೊರಾಟ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ ಎಂದರು,

ಈ ವೇಳೆ ಯಮಕನಮರಡಿ ಯುವ ಘಟಕದ ಅಧ್ಯಕ್ಷ ವಿನಯ ಕೋಳಿ, ಕ್ಷೇತ್ರದ ಅಧ್ಯಕ್ಷ ಬಸವರಾಜ ಲೋಳಸೂರಿ, ರಮೇಶ ಗೀಣಿ, ಶಿವು ಗುಡಸಿ, ಅಲಿ ಪಾಟೀಲ ಸದಾನಂದ ಗುಂಡಿ, ಲಕ್ಷ್ಮಣ ಪೂಜಾರಿ, ಅನೀಲ ಅಳಗುಂಡಿ, ರಾಜು ಕುಂಬಾರ, ಮಾರುತಿಗುಡದಿ, ಬಸವರಾಜ ಮಾನಗಾವಿ, ಬಾಳು ಘಸ್ತಿ, ಅಜೀತ ಕೊಳಿ, ಮುಂತಾದವರು ಇದ್ದರು.