ಸಾರಾಂಶ
ವಿಜಯಪುರ ಜಿಲ್ಲೆಯಲ್ಲಿ 13 ತಾಲೂಕುಗಳಿದ್ದು, ಈಗಾಗಲೇ ಇಂಡಿ ತಾಲೂಕು ಉಪವಿಭಾಗ ಆಗಿರುವುದರಿಂದ ಆಡಳಿತಾತ್ಮಕ ದೃಷ್ಟಿಯಿಂದ ಅವಶ್ಯಕ ಸಂಪನ್ಮೂಲ, ಮೂಲ ಸೌಕರ್ಯ ಹಾಗೂ ಸೌಲಭ್ಯಗಳೊಂದಿಗೆ ಇಂಡಿ ಪ್ರತ್ಯೇಕ ಜಿಲ್ಲೆ ರಚನೆಗೆ ಸಂಬಂಧಿಸಿ ಬೇಕಾಗಿರುವ ಪೂರಕ ಅಂಶಗಳು ಸಾಕಷ್ಟಿವೆ.
ಕನ್ನಡಪ್ರಭ ವಾರ್ತೆ ಇಂಡಿ
ಇಂಡಿ ಪ್ರತ್ಯೇಕ ಜಿಲ್ಲೆ ಹಾಗೂ ಸಂವಿಧಾನದ ವಿಧಿ 371(ಜೆ) ಗೆ ಇಂಡಿ ಹಾಗೂ ಸಿಂದಗಿ ತಾಲೂಕಿ ಸೇರ್ಪಡೆಗೆ ಹಕ್ಕೊತ್ತಾಯ ಮಾಡುವ ಬಗ್ಗೆ ಇಂಡಿ ತಾಲೂಕಿನ ಎಲ್ಲಾ ಮುಸ್ಲಿಂ ಧರ್ಮ ಗುರುಗಳ ನೇತೃತ್ವದಲ್ಲಿ ಗುರುವಾರ ಪಟ್ಟಣದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಶನ್ ವತಿಯಿಂದ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಧರ್ಮ ಗುರುಗಳಾದ ಮೌಲಾನಾ ಶಾಕೀರ್ ಹುಸೇನ್ ಕಾಶ್ಮಿ , ಮೌಲಾನಾ ಜಿಯಾ ಉಲ್ ಹಕ್ ಉಮರಿ, ಮುಫ್ತಿ ಅಬ್ದುಲ್ ರೆಹಮಾನ್ ಅರಬ್ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ 13 ತಾಲೂಕುಗಳಿದ್ದು, ಈಗಾಗಲೇ ಇಂಡಿ ತಾಲೂಕು ಉಪವಿಭಾಗ ಆಗಿರುವುದರಿಂದ ಆಡಳಿತಾತ್ಮಕ ದೃಷ್ಟಿಯಿಂದ ಅವಶ್ಯಕ ಸಂಪನ್ಮೂಲ, ಮೂಲ ಸೌಕರ್ಯ ಹಾಗೂ ಸೌಲಭ್ಯಗಳೊಂದಿಗೆ ಇಂಡಿ ಪ್ರತ್ಯೇಕ ಜಿಲ್ಲೆ ರಚನೆಗೆ ಸಂಬಂಧಿಸಿ ಬೇಕಾಗಿರುವ ಪೂರಕ ಅಂಶಗಳು ಸಾಕಷ್ಟಿವೆ. ಧೀರ್ಘಕಾಲಿನ ಬರ ಪೀಡಿತ ಪ್ರದೇಶಕ್ಕೆ ಶಾಶ್ವತ ಪರಿಹಾರ ಹಾಗೂ ನಂಜುಡಪ್ಪ ವರದಿ ಅನುಷ್ಠಾನಕ್ಕಾಗಿ ಇಂಡಿ ತಾಲೂಕು ಉಪ ವಿಭಾಗದ ವ್ಯಾಪ್ತಿಯನ್ನು ಇಂಡಿ ಜಿಲ್ಲಾ ಕೇಂದ್ರಕ್ಕೆ ಸೇರ್ಪಡೆ ಮಾಡಿ, ಪ್ರತೇಕ ಜಿಲ್ಲಾ ಕೇಂದ್ರವಾಗಿ ಘೋಷಿಸಲು ಸರ್ಕಾರವನ್ನು ಆಗ್ರಹಿಸಿದರು.
ಮೌಲಾನಾ ಅಲ್ಲಾಬಕ್ಷ ಉಜ್ಜನಿ, ಹಾಫೀಜ್ ಮೊಹಮ್ಮದ್ ಭಾಷಾ ಬಾಗವಾನ, ಹಾಫೀಜ್ ಫೀರೋಜ್ ಬಾಗವಾನ, ಹಾಫೀಜ್ ಅಬ್ದುಲ್ ಅಝೀಜ್ ಫೈಝಿ ಇನಾಮದಾರ, ಹಾಫೀಜ್ ಮಹೇಬೂಬ, ಡಾ.ಎಪಿಜೆ ಅಬ್ದುಲ್ ಕಲಾಂ, ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಅಷ್ಪಕ್ ಕೊಂಕಣಿ, ಬಾದಷಾ ಬೋರಮಣಿ, ಸದ್ಯಸರಾದ ಮೈನುದ್ದಿನ್ ಶೇಖ, ಸಮಾಜ ಸೇವಕ ಹಸನ್ ಮುಜಾವರ, ಮೊಹಮ್ಮದ್ ನಾಸಿರ್ ಇನಾಮದಾರ, ಮೌಲಾನಾ ದಾದಾಹಾಯಾತ್ ನಾಯಿಕೋಡಿ, ಹುಸೇನ್ ಬಾಷಾ ಮಿರಜಕರ ಹಾಗೂ ಇಂಡಿ ತಾಲೂಕಿನ ಮುಸ್ಲಿಂ ಧರ್ಮ ಗುರುಗಳು ಉಪಸ್ಥಿತರಿದ್ದರು