ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ

| Published : Jan 06 2024, 02:00 AM IST

ಸಾರಾಂಶ

ರಾಮದುರ್ಗ ಕ್ರಾಸ್‌ದಿಂದ ಬನಶಂಕರಿ ದೇವಸ್ಥಾನದವರೆಗೆ ₹280 ಲಕ್ಷ ವೆಚ್ಚದ ಮರು ಡಾಂಬರೀಕರಣ ಕಾಮಗಾರಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿಗಳ ನಿರ್ವಹಣೆಯ 2023-24ನೇ ಸಾಲಿನ ಲೆಕ್ಕ ಶೀರ್ಷಿಕೆಯಡಿ ಪಟ್ಟಣದ ರಾಮದುರ್ಗ ಕ್ರಾಸ್‌ದಿಂದ ಬನಶಂಕರಿ ದೇವಸ್ಥಾನದವರೆಗೆ ₹280 ಲಕ್ಷ ವೆಚ್ಚದ ಮರು ಡಾಂಬರೀಕರಣ ಕಾಮಗಾರಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಐತಿಹಾಸಿಕ ಪ್ರಸಿದ್ಧ ಬಾದಾಮಿ-ಬನಶಂಕರಿದೇವಿ ಜಾತ್ರೆಯು ಜ.25 ರಂದು ನಡೆಯಲಿದ್ದು, ರಸ್ತೆ ಕಾಮಗಾರಿಯಿಂದ ಬರುವ ಲಕ್ಷಾಂತರ ಜನ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದ ಅವರು ಕಾಮಗಾರಿ ಗುಣಮಟ್ಟದ್ದಾಗಿರಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಮಂಜುನಾಥ ಹೊಸಮನಿ, ರಾಜಮಹ್ಮದ ಬಾಗವಾನ, ಪಾಂಡು ಕಟ್ಟೀಮನಿ, ಶಂಕರ ಕನಕಗಿರಿ, ರಾಮವ್ವ ಮಾದರ, ಮುಖಂಡರಾದ ಅಶೋಕ ಕೋಟನಕರ, ಕೋನಪ್ಪ ಕಾಟನ್ನವರ, ಎಂ.ಎ.ಖಲೀಫ, ಬಸವರಾಜ ಡೊಳ್ಳಿನ ಎಇಇ ಎಸ್.ಜಿ.ಮೇಟಿ, ಸೇರಿದಂತೆ ಮುಖಂಡರು ಹಾಜರಿದ್ದರು.