ಭಾರತದ ಅಧ್ಯಾತ್ಮ ಇತಿಹಾಸ ಜಗತ್ತಿಗೆ ಪಸರಿಸಲಿ

| Published : Jan 14 2024, 01:30 AM IST / Updated: Jan 14 2024, 01:31 AM IST

ಸಾರಾಂಶ

ಸಮೀಪದ ಸುಕ್ಷೇತ್ರ ಇಂಚಲದ ಗ್ರಾಮದಲ್ಲಿ ಶನಿವಾರ ಅಯೋಧ್ಯೆ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ ಮಾತನಾಡಿ, ಮಂತ್ರಾಕ್ಷತೆಯನ್ನು ಭಕ್ತಿಯಿಂದ ಸ್ವೀಕರಿಸಿ ಶ್ರೀರಾಮನನ್ನು ಸ್ಮರಣೆ ಮಾಡುವಂತೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲಭವ್ಯ ರಾಮ ಮಂದಿರದಲ್ಲಿ ಬಾಲ ರಾಮನ ಪ್ರತಿಷ್ಠಾನ ಆಗುತ್ತಿರುವುದು ಎಲ್ಲರ ಮನಸ್ಸಿನ ಭಕ್ತಿ ಭಾವದ ಹಾಗೂ ಭಾರತದ ಹೆಮ್ಮೆಯ ಪ್ರತೀಕವಾಗಿದೆ. ಪ್ರತಿಯೊಬ್ಬರು ರಾಮಭಕ್ತರು ಇದರಲ್ಲಿ ಪಾಲ್ಗೊಂಡು ಭಾರತದ ಅಧ್ಯಾತ್ಮ ಇತಿಹಾಸ ಜಗತ್ತಿಗೆ ಪಸರಿಸಲಿ ಎಂದು ಸುಕ್ಷೇತ್ರ ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ನುಡಿದರು.

ಸಮೀಪದ ಸುಕ್ಷೇತ್ರ ಇಂಚಲದ ಗ್ರಾಮದಲ್ಲಿ ಶನಿವಾರ ಅಯೋಧ್ಯೆ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ ಮಾತನಾಡಿ, ಮಂತ್ರಾಕ್ಷತೆಯನ್ನು ಭಕ್ತಿಯಿಂದ ಸ್ವೀಕರಿಸಿ ಶ್ರೀರಾಮನನ್ನು ಸ್ಮರಣೆ ಮಾಡುವಂತೆ ತಿಳಿಸಿದರು.

ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಪೂರ್ಣಾನಂದ ಭಾರತಿ ಸ್ವಾಮಿಜಿಗಳು ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ ವಿತರಣೆಗೆ ಚಾಲನೆ ನೀಡಿದರು. ಸಮಾಜ ಸೇವಕ ನಾಗಪ್ಪ ಮೇಟಿ, ಕಾರ್ತೀಕ ಮಲ್ಲೂರ, ಪುರಸಭೆ ಸದಸ್ಯ ಗುರು ಮೆಟಗುಡ್ಡ, ಅಂಜನೇಯನ ಭಕ್ತರು, ಹಿಂದೂ ಪರ ಸಂಘಟನೆಗಳ ಸದಸ್ಯರು ಇದ್ದರು.