ಬಿ.ಸಿ. ರೋಡ್‌: ಮನೆಗೊಂದು ಔಷಧಿ ಗಿಡ ಬೆಳೆಸುವ ಅಭಿಯಾನ

| Published : Jun 26 2024, 12:33 AM IST

ಬಿ.ಸಿ. ರೋಡ್‌: ಮನೆಗೊಂದು ಔಷಧಿ ಗಿಡ ಬೆಳೆಸುವ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ತಹಸೀಲ್ದಾರ್ ಅರ್ಚನಾ ಭಟ್ ಮಾತನಾಡಿ, ಸ್ವಚ್ಛತೆಯ ವಿಚಾರವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದರು.

ಬಂಟ್ವಾಳ: ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜನಶಿಕ್ಷಣ ಟ್ರಸ್ಟ್ ಸಾಂತ್ವನ ಕೇಂದ್ರ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮಹಿಳಾ ಸಬಲೀಕರಣಕ್ಕಾಗಿ ಯೋಗ ಧ್ಯೇಯದೊಂದಿಗೆ ಯೋಗ ದಿನಾಚರಣೆ ಹಾಗೂ ಮನೆಗೊಂದು ಔಷಧಿ ಗಿಡ ಬೆಳೆಸುವ ಅಭಿಯಾನ ಕಾರ್ಯಕ್ರಮವು ಬಿ.ಸಿ.ರೋಡಿನ ಸ್ತ್ರೀಶಕ್ತಿ ಭವನದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ನಾವು ಸಾಕಷ್ಟು ಕಡೆಗಳಲ್ಲಿ ತ್ಯಾಜ್ಯದ ರಾಶಿಗಳನ್ನು ಕಾಣುತ್ತಿದ್ದು, ಅವುಗಳ ನಿಯಂತ್ರಣದ ದೃಷ್ಟಿಯಿಂದ ಗಿಡ ಬೆಳೆಸುವ ಪರಿಕಲ್ಪನೆ ಹುಟ್ಟಿಕೊಳ್ಳಬೇಕಿದೆ. ಗಿಡಗಳನ್ನು ಕಂಡಾಗ ಜನರು ಕಸ ಹಾಕುವುದಕ್ಕೆ ಹಿಂದೇಟು ಹಾಕುತ್ತಾರೆ. ಪ್ರತಿಯೊಬ್ಬರೂ ಕೂಡ ತಮ್ಮ ಮನೆಗಳಿಂದಲೇ ತ್ಯಾಜ್ಯ ವಿಲೇವಾರಿಯ ಪ್ರಯತ್ನ ನಡೆಸಬೇಕಿದೆ ಎಂದರು.

ತಹಸೀಲ್ದಾರ್ ಅರ್ಚನಾ ಭಟ್ ಮಾತನಾಡಿ, ಸ್ವಚ್ಛತೆಯ ವಿಚಾರವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಿಡಿಪಿಒ ಮುಮ್ತಾಜ್, ಉಪವಲಯ ಅರಣ್ಯಾಧಿಕಾರಿ ಅನಿಲ್ ಕೆ, ಜನಶಿಕ್ಷಣ ಟ್ರಸ್ಟ್ ಸಹ ನಿರ್ದೇಶಕ ಕೃಷ್ಣ ಮೂಲ್ಯ, ಕಾನೂನು ಸಲಹೆಗಾರ ಶ್ರೀಧರ್ ಪೈ, ನಿವೃತ್ತ ಸಿಡಿಪಿಒ ಸುಧಾ ಜೋಶಿ, ಯೋಗ ತರಬೇತುದಾರೆ ಸರಸ್ವತಿ, ನಿವೃತ್ತ ಸಂರಕ್ಷಣಾಧಿಕಾರಿ ಭಾರತಿ, ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿಯರಾದ ವಿದ್ಯಾ ಕೆ, ನಿಶಾಪ್ರಿಯಾ ಕೆ, ಸುಗ್ರಾಮ ತಾಲೂಕು ಸಂಯೋಜಕರಾದ ಚೇತನ್, ಕಾವೇರಿ ಮೊದಲಾದವರು ಉಪಸ್ಥಿತರಿದ್ದರು.