ಬಿಷ್ಟಮ್ಮ ಕೆರೆಗೆ ಗ್ರಾಮಸ್ಥರಿಂದ ಬಾಗಿನ

| Published : Jul 25 2024, 01:16 AM IST / Updated: Jul 25 2024, 01:17 AM IST

ಸಾರಾಂಶ

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಿಷ್ಟಮ್ಮನ ಕೆರೆ (ವಿಷ್ಣುಸಮುದ್ರ) ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಬಿಟ್ರವಳ್ಳಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕಾಯಕಲ್ಪವಾದರೆ ಇನ್ನು ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ಅಭಿವೃದ್ಧಿ ಮಾಡುತ್ತಿಲ್ಲ ಎಂದು ಸ್ಥಳೀಯರು ಬೇಸರ ಹೊರಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಕಳೆದ ೨೦ ದಿನಗಳಿಂದ ತಾಲೂಕಿನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಿಷ್ಟಮ್ಮನ ಕೆರೆ (ವಿಷ್ಣುಸಮುದ್ರ) ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಬಿಟ್ರವಳ್ಳಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಈ ವೇಳೆ ಮಾತನಾಡಿದ ಜಿಪಂ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ, ಇದೊಂದು ವಿಶೇಷವಾದ ಕೆರೆ. ಈ ಕೆರೆ ಭರ್ತಿಯಾದ ನಂತರ ಇದರ ಆಸರೆಯಾಗಿ ಸುಮಾರು ೧೦ಕ್ಕೂ ಹೆಚ್ಷು ಗ್ರಾಮಗಳ ರೈತರ ಜೀವನಾಡಿಯಾಗಿದೆ. ಕಳೆದ ಎರಡು ವರ್ಷ ಭರ್ತಿಯಾಗಿರಲಿಲ್ಲ, ಈ ವರ್ಷ ಭರ್ತಿಯಾಗಿದೆ. ಈ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕಾಯಕಲ್ಪವಾದರೆ ಇನ್ನು ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ಅಭಿವೃದ್ಧಿ ಮಾಡುತ್ತಿಲ್ಲ. ಈ ವಿಷ್ಣು ಸಮುದ್ರ ಕೆರೆಗೆ ಇತಿಹಾಸವುದ್ದು ಅದನ್ನು ಉಳಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಈ ಕೆರೆಯ ಏರಿ ಮೇಲೆ ಬೃಹಾದಾಕಾರವಾದ ಮರಗಳಿದ್ದು, ಅವುಗಳಿಂದ ಏರಿಗಳು ಬಿರುಕು ಬಿಡುವ ಆತಂಕವಿದೆ. ಅವುಗಳ ತೆರವುಗೊಳಿಸಿ ತಡೆಗೋಡೆ ನಿರ್ಮಾಣ ಮಾಡಿದರೆ ಇನ್ನಷ್ಟು ಸುಂದರವಾಗಿ ಕಾಣುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಷ್ಟಮ್ಮನವರ ಪ್ರಧಾನ ಅರ್ಚಕರಾದ ಗೌರಮ್ಮ ಇಂದ್ರಮ್ಮ ಕೃಷ್ಣೇಗೌಡ, ಶಾಂತೇಗೌಡ ಜಯರಾಂ, ಚಂದ್ರು, ರುದ್ರೇಗೌಡ ಇತರರು ಹಾಜರಿದ್ದರು.